ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಸೂರ್ಯ ಕುಮಾರ್ ಯಾದವ್ ಆಯ್ಕೆ

Last Updated 25 ಜನವರಿ 2023, 14:08 IST
ಅಕ್ಷರ ಗಾತ್ರ

ಮುಂಬೈ: ಚುಟುಕು ಕ್ರಿಕೆಟ್‌ನಲ್ಲಿ ರನ್ ಹೊಳೆ ಹರಿಸುವ ಮೂಲಕ ಅಬ್ಬರದ ಬ್ಯಾಟಿಂಗ್ ಮಾಡುತ್ತಿರುವ ಭಾರತದ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಅವರನ್ನು ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

2022ರಲ್ಲಿ ಟಿ–20 ಕ್ರಿಕೆಟ್‌ನಲ್ಲಿ ಅಬ್ಬರಿಸಿದ ಸೂರ್ಯ, ಹೊಸ ದಾಖಲೆಗಳನ್ನು ಬರೆದಿದ್ದಾರೆ.

ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರನ್, ಪಾಕಿಸ್ತಾನದ ವಿಕೆಟ್ ಕೀಪರ್, ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಮತ್ತು ಜಿಂಬಾಬ್ವೆ ಬ್ಯಾಟಿಂಗ್ ಆಲ್‌ರೌಂಡರ್ ಸಿಕಂದರ್ ರಾಜಾ ಅವರನ್ನು ಹಿಂದಿಕ್ಕಿ ಈ ಅತ್ಯುನ್ನತ ಗೌರವ ಪಡೆದಿದ್ದಾರೆ.

ಈ ಮಧ್ಯೆ, ಮಹಿಳಾ ಕ್ರಿಕೆಟಿಗರ ವಿಭಾಗದಲ್ಲಿ ಭಾರತ ಮಹಿಳೆಯರ ಕ್ರಿಕೆಟ್ ತಂಡದ ಉಪ ನಾಯಕಿ ಮತ್ತು ಕಳೆದ ವರ್ಷದ ಕ್ರಿಕೆಟರ್ ಆಫ್ ದಿ ಇಯರ್ ಸ್ಮೃತಿ ಮಂದಾನಾ, ಆಸ್ಟ್ರೇಲಿಯಾ ತಹ್ಲಿಯಾ ಮೆಗ್ರಾಥ್‌ಗಿಂತಲೂ ಹಿಂದೆ ಉಳಿದಿದ್ದಾರೆ.

ಅಭಿಮಾನಿಗಳಿಂದ ‘ಸ್ಕೈ’ಎಂದು ಕರೆಸಿಕೊಳ್ಳುವ 32 ವರ್ಷದ ಸೂರ್ಯ ಕುಮಾರ್ ಯಾದವ್, ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಕಲೆ ಹಾಕಿದ ಎರಡನೇ ಆಟಗಾರ. ಕಳೆದ ವರ್ಷ 187.43 ಸ್ಟ್ರೈಕ್ ರೇಟ್‌ನಲ್ಲಿ ಅವರು 1,164 ರನ್ ಚಚ್ಚಿದ್ದಾರೆ.

ವರ್ಷದಲ್ಲಿ ಸ್ಫೋಟಕ 68 ಸಿಕ್ಸರ್‌ಗಳನ್ನು ಅವರು ಸಿಡಿಸಿದ್ದಾರೆ. 2 ಶತಕ ಮತ್ತು 9 ಅರ್ಧಶತಕ ಸಿಡಿಸಿರುವ ಅವರು ಈ ವರ್ಷ ತಂಡದಲ್ಲಿ ಪ್ರಮುಖ ಆಟಗಾರನೆನಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT