ಶನಿವಾರ, ಅಕ್ಟೋಬರ್ 23, 2021
21 °C
ಭಾರತ ಕ್ರಿಕೆಟ್ ತಂಡದ ತವರಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ; ಟಿ20 ಪಂದ್ಯಕ್ಕೂ ಉದ್ಯಾನ ನಗರಿ ಆತಿಥ್ಯ

ಬೆಂಗಳೂರಿನಲ್ಲಿ ಲಂಕಾ ಎದುರಿನ ಟೆಸ್ಟ್‌ ಪಂದ್ಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಮತ್ತು ಶ್ರೀಲಂಕಾ ನಡುವಿನ ಟೆಸ್ಟ್ ಕ್ರಿಕೆಟ್‌ ಪಂದ್ಯಕ್ಕೆ ಮುಂದಿನ ವರ್ಷ ಬೆಂಗಳೂರು ಆತಿಥ್ಯ ವಹಿಸಲಿದೆ. ಈ ಪಂದ್ಯ ಫೆಬ್ರುವರಿ 25ರಿಂದ ನಡೆಯಲಿದೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯ ಪಂದ್ಯ ಕೂಡ ಬೆಂಗಳೂರಿನಲ್ಲಿ ನಡೆಯಲಿದೆ.

ಭಾರತ ತಂಡ ಮುಂದಿನ ಋತುವಿನಲ್ಲಿ ತವರಿನಲ್ಲಿ ಆಡುವ ಪಂದ್ಯಗಳ ವೇಳಾಪಟ್ಟಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಸೋಮವಾರ ಬಿಡುಗಡೆ ಮಾಡಿದೆ. ತವರಿನಲ್ಲಿ ಒಟ್ಟು 14 ಟಿ20, ನಾಲ್ಕು ಟೆಸ್ಟ್‌ ಹಾಗೂ ಮೂರು ಏಕದಿನ ಪಂದ್ಯಗಳು ನಡೆಯಲಿವೆ. ಈ ವರ್ಷದ ನವೆಂಬರ್‌ನಿಂದ ಮುಂದಿನ ವರ್ಷದ ಜೂನ್ ವರೆಗಿನ ಅವಧಿಯಲ್ಲಿ ನ್ಯೂಜಿಲೆಂಡ್‌, ವೆಸ್ಟ್ ಇಂಡೀಸ್‌, ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಭಾರತ ಪ್ರವಾಸ ಕೈಗೊಳ್ಳಲಿವೆ.

ಈ ವರ್ಷದ ಡಿಸೆಂಬರ್‌ ಮತ್ತು ಜನವರಿಯಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ. ಮುಂದಿನ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಐಪಿಎಲ್‌ ನಡೆಯುವ ಸಾಧ್ಯತೆ ಇದೆ. ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳನ್ನು ಭಾರತ ಆಡಲಿದ್ದು ವೆಸ್ಟ್ ಇಂಡೀಸ್ ವಿರುದ್ಧ ಮೂರು ಏಕದಿನ ಮತ್ತು ಐದು ಟಿ20 ಪಂದ್ಯಗಳನ್ನು ಆಡಲಿದೆ.

ಶ್ರೀಲಂಕಾ ತಂಡ ಭಾರತದಲ್ಲಿ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದ್ದು ದಕ್ಷಿಣ ಆಫ್ರಿಕಾ 10 ದಿನಗಳ ಪ್ರವಾಸದಲ್ಲಿ ಐದು ಟಿ20 ಪಂದ್ಯಗಳನ್ನು ಆಡಲಿದೆ. ರೊಟೇಷನ್ ಪದ್ಧತಿಯಡಿ ಬಹುತೇಕ ಎಲ್ಲ ನಗರಗಳಿಗೂ ಏಕದಿನ ಮತ್ತು ಟಿ20 ಪಂದ್ಯಗಳನ್ನು ಹಂಚಲಾಗಿದೆ. ಜೈಪುರ, ರಾಂಚಿ, ಲಖನೌ, ವಿಶಾಖಪಟ್ಟಣ, ಕೋಲ್ಕತ್ತ, ಅಹಮದಾಬಾದ್‌, ಕಟಕ್‌, ತಿರುವನಂತಪುರ, ಚೆನ್ನೈ, ರಾಜ್‌ಕೋಟ್‌ ಮತ್ತು ದೆಹಲಿ ನಗರಗಳಿಗೂ ಆತಿಥ್ಯದ ಅವಕಾಶ ಲಭಿಸಿದೆ.

‘ಆಸ್ಟ್ರೇಲಿಯಾದಲ್ಲಿ ಮುಂದಿನ ಟಿ20 ವಿಶ್ವಕಪ್ ಟೂರ್ನಿ ನಡೆಯಲಿದೆ. ಅದಕ್ಕೂ ಮೊದಲು ಭಾರತಕ್ಕೆ ಸಾಕಷ್ಟು ಪಂದ್ಯಗಳು ಸಿಗಬೇಕಿದೆ. ಈ ಹಿನ್ನೆಲೆಯಲ್ಲಿ 14 ಪಂದ್ಯಗಳಿಗೆ ಆತಿಥ್ಯ ವಹಿಸಲು ಒಪ್ಪಿಕೊಳ್ಳಲಾಗಿದೆ’ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದರು.

 

ಭಾರತದಲ್ಲಿ ನಡೆಯಲಿರುವ ಸರಣಿಗಳು

ಪ್ರವಾಸಿ ತಂಡ: ನ್ಯೂಜಿಲೆಂಡ್

ದಿನಾಂಕ;ಪಂದ್ಯ;ಆತಿಥ್ಯ

ನ.17;ಮೊದಲ ಟಿ20;ಜೈಪುರ

ನ.19;2ನೇ ಟಿ20;ರಾಂಚಿ

ನ.21;3ನೇ ಟಿ20;ಕೋಲ್ಕತ್ತ

ನ.25ರಿಂದ;ಮೊದಲ ಟೆಸ್ಟ್‌;ಕಾನ್ಪುರ

ಡಿ.3ರಿಂದ;2ನೇ ಟೆಸ್ಟ್‌;ಮುಂಬೈ

 

ಪ್ರವಾಸಿ ತಂಡ: ವೆಸ್ಟ್ ಇಂಡೀಸ್‌

ಫೆ.6;ಮೊದಲ ಏಕದಿನ;ಅಹಮದಾಬಾದ್

ಫೆ.9;2ನೇ ಏಕದಿನ;ಜೈಪುರ

ಫೆ.12;3ನೇ ಏಕದಿನ;ಕೋಲ್ಕತ್ತ

ಫೆ.15;ಮೊದಲ ಟಿ20;ಕಟಕ್‌

ಫೆ.18;2ನೇ ಟಿ20;ವಿಶಾಖಪಟ್ಟಣ

ಫೆ.20;3ನೇ ಟಿ20;ತಿರುವನಂತಪುರ

 

ಪ್ರವಾಸಿ ತಂಡ: ಶ್ರೀಲಂಕಾ

ಫೆ.25ರಿಂದ;ಮೊದಲ ಟೆಸ್ಟ್;ಬೆಂಗಳೂರು

ಮಾ.5ರಿಂದ;2ನೇ ಟೆಸ್ಟ್‌;ಮೊಹಾಲಿ

ಮಾ.13;ಮೊದಲನೇ ಟಿ20;ಮೊಹಾಲಿ

ಮಾ.15;2ನೇ ಟಿ20;ಧರ್ಮಶಾಲ

ಮಾ.18;3ನೇ ಟಿ20;ಲಖನೌ

 

ಪ್ರವಾಸಿ ತಂಡ: ದಕ್ಷಿಣ ಆಫ್ರಿಕಾ

ಜೂ.9;ಮೊದಲ ಟಿ20;ಚೆನ್ನೈ

ಜೂ.12;2ನೇ ಟಿ20;ಬೆಂಗಳೂರು

ಜೂ.14;3ನೇ ಟಿ20;ನಾಗ್ಪುರ

ಜೂ.17;4ನೇ ಟಿ20;ರಾಜ್‌ಕೋಟ್‌

ಜೂ.19;5ನೇ ಟಿ20;ದೆಹಲಿ

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು