ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಲೀಪ್ ಟ್ರೋಫಿ ಪರಿಷ್ಕರಣೆಗೆ ಸಚಿನ್ ಸಲಹೆ

Last Updated 26 ನವೆಂಬರ್ 2019, 20:18 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ದುಲೀಪ್ಟ್ರೋಫಿ ಟೂರ್ನಿಯಲ್ಲಿ ತಂಡ ಸ್ಫೂರ್ತಿಯ ಕೊರತೆ ಎದ್ದು ಕಾಣುತ್ತಿದೆ. ಈ ಟೂರ್ನಿಯನ್ನು ಕುತೂಹಲಕಾರಿಯಾಗಿಸಲು ಮರುಪರಿಷ್ಕರಣೆ ಅಗತ್ಯ ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ಸೌರವ್‌ ಗಂಗೂಲಿ ಅವರನ್ನು ಉದ್ದೇಶಿಸಿ ಹೇಳಿಕೆ ನೀಡಿರುವ ಸಚಿನ್, ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿಯೂ ಕೆಲವು ಬದಲಾವಣೆಗಳಿಗೆ ಸಲಹೆ ನೀಡಿದ್ದಾರೆ.

‘ದುಲೀಪ್ ಟ್ರೋಫಿಯಲ್ಲಿ ಆಟಗಾರರಿಗೆ ತಂಡ ಸ್ಫೂರ್ತಿಯ ಭಾವನೆ ಇಲ್ಲ. ತಮ್ಮ ವೈಯಕ್ತಿಕ ಸಾಮರ್ಥ್ಯವನ್ನು ಸಾಬೀತು ಮಾಡುವತ್ತಲೇ ಹೆಚ್ಚು ಚಿತ್ತ ನೆಟ್ಟಿರುತ್ತಾರೆಂದು ಬಹಳಷ್ಟು ಜನರು ಹೇಳಿದ್ದನ್ನು ಕೇಳಿದ್ದೇನೆ. ದುಲೀಪ್ ಟೂರ್ನಿ ಮುಗಿದ ತಕ್ಷಣ ಇರುವ ಐಪಿಎಲ್ ಅಥವಾ ಅಂತರರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತಾರೆ. ಇದರಿಂದ ನಾಲ್ಕು ದಿನಗಳ ಪಂದ್ಯಗಳು ನೀರಸವಾಗುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಅವರು (ಗಂಗೂಲಿ) ದುಲೀಪ್ ಟ್ರೋಫಿ ಟೂರ್ನಿಯ ಮರುಪರಿಷ್ಕರಣೆ ಕುರಿತು ಗಮನ ಹರಿಸಬೇಕು. ಕ್ರಿಕೆಟ್ ಎಂದರೆ ತಂಡಗಳ ಆಟ. ಅದೇ ಕಳೆದುಹೋದರೆ ಟೂರ್ನಿಯಲ್ಲಿ ಯಾವುದೇ ಸ್ವಾರಸ್ಯ ಉಳಿಯುವುದಿಲ್ಲ’ ಎಂದರು.

ಕೆಲವು ವರ್ಷಗಳ ಹಿಂದೆ ದುಲೀಪ್‌ ಟ್ರೋಫಿಯನ್ನುಅಂತರ ವಲಯ ಟೂರ್ನಿಯನ್ನಾಗಿ ಆಡಿಸಲಾಗುತ್ತಿತ್ತು. ಆಗ ಐದು ತಂಡಗಳು ಸ್ಪರ್ಧಿಸುತ್ತಿದ್ದವು. ಈಚೆಗೆ ಇದನ್ನು ಬದಲಾಯಿಸಲಾಗಿದೆ. ಇಂಡಿಯಾ ಬ್ಲ್ಯೂ, ಇಂಡಿಯಾ ಗ್ರೀನ್, ಹಾಗೂ ಇಂಡಿಯಾ ರೆಡ್ ತಂಡಗಳು ಆಡುತ್ತಿವೆ.

‘ದುಲೀಪ್ ಟ್ರೋಫಿ ಟೂರ್ನಿಯನ್ನು ರಣಜಿ ಫೈನಲ್‌ ನಂತರ ಆಯೋಜಿಸಬೇಕು. ರಣಜಿ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಆಡುವ ನಾಲ್ಕು ತಂಡಗಳು ಇಲ್ಲಿ ಆಡಬೇಕು. ಜೊತೆಗೆ ಇನ್ನೆರಡು ತಂಡಗಳನ್ನೂ ಆಡಿಸಬೇಕು. ಅದರಲ್ಲಿ ರಣಜಿ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಅರ್ಹತೆ ಗಳಿಸದ ಆದರೆ ಗಮನಾರ್ಹ ಆಟವಾಡಿದ ತಂಡಗಳ ಆಟಗಾರರಿಗೆ ಅವಕಾಶ ನೀಡಬೇಕು. ಅಲ್ಲದೇ 19 ವರ್ಷದೊಳಗಿನ ಮತ್ತು 23 ವರ್ಷದೊಳಗಿನವರ ವಯೋಮಿತಿಯ ಟೂರ್ನಿಗಳಲ್ಲಿ ಉತ್ತಮವಾಗಿ ಆಡಿದವರನ್ನು ಆಯ್ಕೆ ಮಾಡಬಹುದು. ಇದರಿಂದಾ ಜೂನಿಯರ್ ಆಟಗಾರರಿಗೂ ಅವಕಾಶ ಕೊಟ್ಟಂತಾಗುತ್ತದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT