ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಟೆಸ್ಟ್: ಸಂಕಷ್ಟದಲ್ಲಿ ಭಾರತ ‘ಎ’, ಮಯಂಕ್ ಏಕಾಂಗಿ ಹೋರಾಟ

Last Updated 5 ಸೆಪ್ಟೆಂಬರ್ 2018, 7:31 IST
ಅಕ್ಷರ ಗಾತ್ರ

ಬೆಂಗಳೂರು: ಆಸ್ಟ್ರೇಲಿಯಾ ಎ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಭಾರತ ಎ ತಂಡವು ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಅರ್ಧಶತಕ ಗಳಿಸಿರುವ ಮಯಂಕ್ ಅಗರವಾಲ್ ಏಕಾಂಗಿ ಹೋರಾಟ ನಡೆಸುತ್ತಿದ್ದಾರೆ.

ಪಂದ್ಯದ ಕೊನೆಯ ದಿನವಾದ ಬುಧವಾರಊಟದ ವಿರಾಮದ ವೇಳೆಗೆ ಭಾರತ ಎ ತಂಡವು 49 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 128 ರನ್‌ಗಳನ್ನು ಗಳಿಸಿತ್ತು. ಮಯಂಕ್ (ಬ್ಯಾಟಿಂಗ್ 56) ಮತ್ತು ಕುಲದೀಪ್ ಯಾದವ್ (ಬ್ಯಾಟಿಂಗ್) ಕ್ರೀಸ್‌ನಲ್ಲಿದ್ದಾರೆ.

ಮಂಗಳವಾರ ಸಂಜೆ 262 ರನ್‌ಗಳ ಗುರಿಯನ್ನು ಬೆನ್ನತ್ತಿದ್ದ ಭಾರತ ಎ ತಂಡವು 61 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡಿತ್ತು. ಬುಧವಾರ 199 ರನ್‌ಗಳನ್ನು ಗಳಿಸಿ ಗೆಲುವಿನ ದಡ ಸೇರುವ ಆತಿಥೇಯ ತಂಡದ ಯೋಜನೆಗೆ ಪ್ರವಾಸಿ ಬಳಗದ ಜಾನ್ ಹಾಲೆಂಡ್ (72ಕ್ಕೆ3) ಪೆಟ್ಟು ನೀಡಿದರು. ಅವರು ಅಂಕಿತ್ ಭಾವ್ನೆ ಅವರನ್ನು ಕ್ಲೀನ್‌ಬೌಲ್ಡ್‌ ಮಾಡುವ ಮೂಲಕ ಭಾರತಕ್ಕೆ ದಿನದ ಮೊದಲ ಪೆಟ್ಟು ನೀಡಿದರು. ನಂತರ ಟ್ರಾವಿಸ್ ಹೆಡ್ ಎಸೆತದಲ್ಲಿ ಸಮರ್ಥ್ (8ರನ್) ಔಟಾದರು. ಕೆ. ಗೌತಮ್ ಕೂಡ ಹಾಲೆಂಡ್ ಎಸೆತದಲ್ಲಿ ನಿರ್ಗಮಿಸಿದರು. ಅವರು ಒಂದೂ ರನ್‌ ಗಳಿಸಲಿಲ್ಲ. ಕುಲದೀಪ್ ಯಾದವ್ ಒಂಬತ್ತು ಎಸೆತಗಳನ್ನು ಆಡಿದರು. ಕೆ.ಎಸ್. ಭರತ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ ಮಯಂಕ್ ಅಗರವಾಲ್ ಮಾತ್ರ ಗಟ್ಟಿಯಾಗಿ ನಿಂತು ಆಡಿದರು.

ಸ್ಕೋರ್:

ಮೊದಲ ಇನಿಂಗ್ಸ್‌ ಆಸ್ಟ್ರೇಲಿಯಾ ಎ- 243; ಭಾರತ ಎ -274

ಎರಡನೇ ಇನಿಂಗ್ಸ್‌ ಆಸ್ಟ್ರೇಲಿಯಾ ಎ -292; ಭಾರತ ಎ -6ಕ್ಕೆ 128 (49 ಓವರ್‌ಗಳಲ್ಲಿ)

ಮಯಂಕ್ ಅಗರವಾಲ್ ಬ್ಯಾಟಿಂಗ್ 56,ಅಂಕಿತ್ ಭಾವ್ನೆ ಬಿ ಜಾನ್ ಹಾಲೆಂಡ್ 25, ಆರ್. ಸಮರ್ಥ್ ಸಿ ಮತ್ತು ಬಿ ಟ್ರಾವಿಸ್ ಹೆಡ್ 08, ಕೆ.ಎಸ್. ಭರತ್ ಸಿ ಪೀಟರ್ ಹ್ಯಾಂಡ್ಸ್‌ಕಂಬ್ ಬಿ ಬ್ರೆಂಡನ್ ಡಾಜೆಟ್ 00, ಕೃಷ್ಣಪ್ಪ ಗೌತಮ್ ಎಲ್‌ಬಿಡಬ್ಲ್ಯು ಜಾನ್ ಹಾಲೆಂಡ್ 00, ಕುಲದೀಪ್ ಯಾದವ್ ಸಿ ಅಲೆಕ್ಸ್‌ ಕ್ಯಾರಿ ಬಿ ಬ್ರೆಂಡನ್ ಡಾಜೆಟ್ 02, ಮೊಹಮ್ಮದ್ ಸಿರಾಜ್ ಔಟಾಗದೆ 00

ಇತರೆ: 11 (ನೋಬಾಲ್ 1, ವೈಡ್ 1, ಬೈ 9, ಲೆಗ್‌ಬೈ 1)

ವಿಕೆಟ್ ಪತನ: 3–106 (ಅಂಕಿತ್; 37.2), 4–124 (ಸಮರ್ಥ್; 45.4), 5–125 (ಭರತ್: 46.2), 6–126 (ಗೌತಮ್; 47.6),

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT