ಭಾನುವಾರ, ಡಿಸೆಂಬರ್ 8, 2019
21 °C

ಐಪಿಎಲ್: ರಾಜಸ್ಥಾನ್‌ಗೆ ರಜಪೂತ್, ಮುಂಬೈಗೆ ಬೋಲ್ಟ್

Published:
Updated:
Prajavani

ಬೆಂಗಳೂರು: ಮಧ್ಯಮವೇಗದ ಬೌಲರ್ ಅಂಕಿತ್ ರಜಪೂತ್  ಅವರು  ಇಂಡಿಯನ್ ‍ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಅವರನ್ನು ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಟ್ರೇಡ್ ನಿಯಮದಲ್ಲಿ ವಿನಿಮಯ ಮಾಡಿಕೊಂಡಿದೆ. ಅವರಿಗೆ ಪ್ರತಿಯಾಗಿ ರಾಯಲ್ಸ್‌ ತಂಡದ ಎಡಗೈ ವೇಗಿ ಟ್ರೆಂಟ್ ಬೋಲ್ಟ್ ಅವರು ಪಂಜಾಬ್‌ ತಂಡವನ್ನು ಸೇರಿದ್ದಾರೆ.

ಅಂಕಿತ್ 2018ರಲ್ಲಿ ಪಂಜಾಬ್ ತಂಡದಲ್ಲಿ ಆಡಿದ್ದರು. ಅವರು ಐಪಿಎಲ್‌ನಲ್ಲಿ ಒಟ್ಟು 23 ಪಂದ್ಯಗಳನ್ನು ಆಡಿ 22 ವಿಕೆಟ್‌ಗಳನ್ನು ಗಳಿಸಿದ್ದಾರೆ. ಅವರು ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಎದುರಿನ ಪಂದ್ಯದಲ್ಲಿ ರಜಪೂತ್ (14ಕ್ಕೆ5) ಐದು ವಿಕೆಟ್ ಗೊಂಚಲು ಪಡೆದಿದ್ದರು.

ನ್ಯೂಜಿಲೆಂಡ್‌ನ ಎಡಗೈ ವೇಗಿ ಟ್ರೆಂಟ್ ಅವರು ಐಪಿಎಲ್‌ನಲ್ಲಿ 33 ಪಂದ್ಯಗಳಿಂದ 38 ವಿಕೆಟ್‌ಗಳನ್ನು ಬಳಿಸಿದ್ದರೆ. 2018 ಮತ್ತು 2019ರಲ್ಲಿ ಅವರು ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆಡಿದ್ದರು. 2014ರಲ್ಲಿ ಅವರು ಮೊದಲ ಸಲ ಐಪಿಎಲ್‌ಗೆ ಕಾಲಿಟ್ಟಿದ್ದರು. ಈಚೆಗಷ್ಟೇ ಅವರನ್ನು ಡೆಲ್ಲಿ ತಂಡವು ವಾಣಿಜ್ಯ ವಿನಿಮಯದಡಿಯಲ್ಲಿ ಮುಂಬೈ ತಂಡಕ್ಕೆ ಹೋಗಲು ಅನುಮತಿ ನೀಡಿತ್ತು ಎಂದು ಬಿಸಿಸಿಐ ಕಾರ್ಯದರ್ಶಿ ಜೈ ಶಾ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು