ಗುರುವಾರ , ಜೂನ್ 17, 2021
21 °C
ಪಾಕಿಸ್ತಾನ–ಇಂಗ್ಲೆಂಡ್‌ ಟೆಸ್ಟ್‌ ಸರಣಿಯಲ್ಲಿ ನಿಯಮ ಬಳಕೆ

ಟೆಸ್ಟ್‌ ಕ್ರಿಕೆಟ್‌: ನೋಬಾಲ್‌ ನಿರ್ಧಾರ ಪ್ರಕಟಿಸಲಿರುವ ಟಿವಿ ಅಂಪೈರ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಟೆಸ್ಟ್‌ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಫ್ರಂಟ್‌ ಫೂಟ್‌ ನೋಬಾಲ್‌ ನಿರ್ಧಾರವನ್ನು ಫೀಲ್ಡ್ ಅಂಪೈರ್‌ ಬದಲಿಗೆ ಟಿವಿ ಅಂಪೈರ್‌ ಪ್ರಕಟಿಸಲಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಬುಧವಾರ ಈ ವಿಷಯವನ್ನು ತಿಳಿಸಿದೆ. ಪಾಕಿಸ್ತಾನ ಹಾಗೂ ಇಂಗ್ಲೆಂಡ್‌ ನಡುವಣ ಟೆಸ್ಟ್‌ ಸರಣಿಯಲ್ಲಿ ಈ ನಿಯಮವನ್ನು ಪ್ರಾಯೋಗಿಕವಾಗಿ ಬಳಕೆ ಮಾಡಲಾಗುತ್ತದೆ. 

‘ಪಾಕ್‌–ಇಂಗ್ಲೆಂಡ್‌ ಪಂದ್ಯಗಳ ಅಳವಡಿಸಲಾದ ನಿಯಮದ ಕಾರ್ಯಕ್ಷಮತೆಯನ್ನು ಪರಿಶೀಲಿಸಿ, ಮುಂದಿನ ದಿನಗಳಲ್ಲಿ ಈ ನಿಯಮವನ್ನು ಮುಂದುವರಿಸುವ ಕುರಿತು ನಿರ್ಧಾರ ತೆಗೆದುಕೊಳ್ಳಲಾಗುವುದು‘ ಎಂದು ಐಸಿಸಿ ಟ್ವೀಟ್‌ ಮಾಡಿದೆ. 

ಮಂಗಳವಾರ ಕೊನೆಗೊಂಡ ಇಂಗ್ಲೆಂಡ್‌–ಐರ್ಲೆಂಡ್‌ ನಡುವಣ ಏಕದಿನ ಸರಣಿಯಲ್ಲಿ ಫ್ರಂಟ್‌ ಫೂಟ್‌ ನೋಬಾಲ್‌ ಮೇಲ್ವಿಚಾರಣೆಯನ್ನು ಮೂರನೇ ಅಂಪೈರ್‌ ನೋಡಿಕೊಂಡಿದ್ದರು. ಐಸಿಸಿ ವಿಶ್ವ ಸೂಪರ್‌ ಲೀಗ್‌ನ ಭಾಗವಾಗಿ ಈ ಸರಣಿ ನಡೆದಿತ್ತು.

ಹೋದ ವರ್ಷ ಭಾರತ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳ ನಡುವೆ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲೂ ಈ ನಿಯಮದ ಪ್ರಯೋಗ ನಡೆಸಲಾಗಿತ್ತು. ಈ ವರ್ಷದ ಆರಂಭದಲ್ಲಿ ನಡೆದ ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ ಟೂರ್ನಿಯಲ್ಲಿ ಈ ನಿಯಮವನ್ನು ಬಳಕೆ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು