ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಪೈರ್ಸ್‌ ಕಾಲ್’ ಇಲ್ಲ ಕತ್ತರಿ: ಐಸಿಸಿ ನಿರ್ಧಾರ

Last Updated 2 ಏಪ್ರಿಲ್ 2021, 1:57 IST
ಅಕ್ಷರ ಗಾತ್ರ

ದುಬೈ: ಎಲ್‌ಬಿಡಬ್ಲ್ಯುಗೆ ಸಂಬಂಧಿಸಿ ಅಂಪೈರ್‌ಗಳ ನಿರ್ಧಾರ ಮರುಪರಿಶೀಲನೆ ಮಾಡುವ ಸಂದರ್ಭದಲ್ಲಿ ‘ಅಂಪೈರ್ಸ್ ಕಾಲ್’ ಕೈಬಿಡದೇ ಇರಲು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿರ್ಧರಿಸಿದೆ. ಆದರೆ ಸದ್ಯ ಅನಸರಿಸುತ್ತಿರುವ ಡಿಆರ್‌ಎಸ್‌ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ.

ಅಂಪೈರ್ಸ್‌ ಕಾಲ್‌ನಲ್ಲಿ ಗೊಂದಲಗಳಿವೆ ಎಂದು ಇಂಗ್ಲೆಂಡ್ ಮತ್ತು ಭಾರತ ನಡುವಿನ ಕ್ರಿಕೆಟ್ ಸರಣಿ ಸಂದರ್ಭದಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಅದರ ನಂತರ ಇದು ಚರ್ಚೆಗೆ ಗ್ರಾಸವಾಗಿತ್ತು. ಸದ್ಯದ ನಿಯಮದ ಪ್ರಕಾರ ಅಂಪೈರ್ ನೀಡಿದ ನಾಟೌಟ್ ತೀರ್ಪನ್ನು ಪ್ರಶ್ನಿಸಿ ಔಟ್‌ ಎಂದು ಮೂರನೇ ಅಂಪೈರ್‌ಗೆ ಮನವರಿಕೆಯಾಗಬೇಕಾದರೆ ಚೆಂಡಿನ ಅರ್ಧಕ್ಕಿಂತಲೂ ಹೆಚ್ಚಿನ ಭಾಗ ಸ್ಟಂಪ್‌ಗೆ ತಾಗುವಂತಿರಬೇಕು. ಆದರೆ ಚೆಂಡು ಸ್ಟಂಪಿಗೆ ಸ್ವಲ್ಪವೇ ಬಡಿಯುವಂತಿದ್ದರೂ ಔಟ್ ಕೊಡಬೇಕು ಎಂದು ವಿರಾಟ್ ಕೊಹ್ಲಿ ವಾದಿಸಿದ್ದರು.

ಗುರುವಾರ ನಡೆದ ಸಭೆಯಲ್ಲಿ ಡಿಆರ್‌ಎಸ್‌ಗೆ ಮೂರು ಸಣ್ಣ ಬದಲಾವಣೆಗಳನ್ನು ತರಲು ಐಸಿಸಿ ನಿರ್ಧರಿಸಿತು. ಎಲ್‌ಬಿಡಬ್ಲ್ಯುಗೆ ಸಂಬಂಧಿಸಿದ ತೀರ್ಪು ಮರುಪರಿಶೀಲನೆ ವೇಳೆ ಸ್ಟಂಪಿನ ಎತ್ತರವನ್ನು ಬೇಲ್ಸ್‌ನ ಮೇಲ್ಭಾಗದ ವರೆಗೂ ಪರಿಗಣಿಸಲು ನಿರ್ಧರಿಸಲಾಗಿದೆ.

ಎಲ್‌ಬಿಡಬ್ಲ್ಯುಗೆ ಸಂಬಂಧಿಸಿ ಅಂಪೈರ್‌ಗೆ ಮನವಿ ಸಲ್ಲಿಸುವುದಕ್ಕೂ ಮೊದಲು ಆಟಗಾರ ತಾನು ಹೊಡೆತಕ್ಕೆ ಮುಂದಾಗಿದ್ದನೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಬ್ಯಾಟ್ಸ್‌ಮನ್‌ಗೇ ಅವಕಾಶ ನೀಡಲಾಗಿದೆ. ಶಾರ್ಟ್‌ ರನ್ ಕೂಡ ಮೂರನೇ ಅಂಪೈರ್ ಪರಿಶೀಲಿಸುವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT