ಬೆಂಗಳೂರು: ಅನ್ವಯ್ ದ್ರಾವಿಡ್, ಬಿಸಿಸಿಐ ವಿಜಯ್ ಮರ್ಚೆಂಟ್ ಟ್ರೋಫಿ (16 ವರ್ಷದೊಳಗಿನವರ) ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸೋಮವಾರ ಶತಕ ಹೊಡೆದು ಕರ್ನಾಟಕದ ಮುಖಭಂಗ ತಪ್ಪಿಸಿದರು. ಆದರೆ, ಅಹ್ಮದಾಬಾದ್ನ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ ‘ಡ್ರಾ’ ಆದ ಈ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಪ್ರಾಬಲ್ಯ ಮೆರೆದ ಪಂಜಾಬ್
ತಂಡ ನಿರೀಕ್ಷೆಯಂತೆ ಸೆಮಿಫೈನಲ್ ತಲುಪಿತು.

ನಾಲ್ಕು ದಿನಗಳ ಈ ಪಂದ್ಯದಲ್ಲಿ ಮೊದಲ ಇನಿಂಗ್ಸ್ ಪೂರ್ಣಗೊಳ್ಳಲಿಲ್ಲ. ಪಂಜಾಬ್ನ 742 ರನ್ (9 ವಿಕೆಟ್ಗೆ ಡಿಕ್ಲೇರ್ಡ್) ಗಳಿಸಿದಾಗಲೇ ಕರ್ನಾಟಕದ ಹಾದಿ ಮುಚ್ಚಿತ್ತು. ಅನ್ವಯ್ ಅಜೇಯ 110 ರನ್ (234ಎ, 4x12) ಬಾರಿಸಿ ಕರ್ನಾಟಕ ಆಲೌಟ್ ಆಗುವುದನ್ನು ತಡೆದರು. ಪಂದ್ಯ ಕೊನೆಗೊಂಡಾಗ ಕರ್ನಾಟಕ 7 ವಿಕೆಟ್ಗೆ 280 ರನ್ ಗಳಿಸಿತ್ತು.

ಸ್ಕೋರುಗಳು (ಕ್ವಾರ್ಟರ್ಫೈನಲ್): 246.3 ಓವರುಗಳಲ್ಲಿ 9 ವಿಕೆಟ್ಗೆ 742 (ಗುರುಸಿಮ್ರಣ ಸಿಂಗ್ 230, ಶಾನ್ವಿರ್ ಕಲ್ಸಿ 84, ಅದ್ವಿಕ್ ಸಿಂಗ್ 81, ಸಂದೀಪ್ ಸಿಂಗ್ 85, ನಿಕೇತ್ ನಂದಾ ಔಟಾಗದೇ 51, ಸಾಹಿಬ್ ಜೋತ್ವೀರ್ ಸಿಂಗ್ 68; ಧ್ಯಾನ್ ಎಂ.ಹಿರೇಮಠ 152ಕ್ಕೆ4); ಕರ್ನಾಟಕ: 117 ಓವರುಗಳಲ್ಲಿ 7 ವಿಕೆಟ್ಗೆ 280 (ಧ್ರುವ್ ಕೃಷ್ಣನ್ 73, ಸ್ಯಾಮಂತಕ್ ಅನಿರುದ್ಧ 31, ಅನ್ವಯ್ ದ್ರಾವಿಡ್ ಔಟಾಗದೇ 110, ಧ್ಯಾನ್ ಎಂ.ಹಿರೇಮಠ 33; ಸಾಕ್ಷೇಯ 86ಕ್ಕೆ5).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.