ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಯ ಕಾರು, ಬೈಕ್‌ಗಳ ಸಂಗ್ರಹ ಕಂಡು ಬೆರಗಾದ ವೆಂಕಟೇಶ್‌ ಪ್ರಸಾದ್‌

Published 18 ಜುಲೈ 2023, 15:50 IST
Last Updated 18 ಜುಲೈ 2023, 15:50 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಕಾರು ಮತ್ತು ಬೈಕ್‌ಗಳ ಸಂಗ್ರಹ ನೋಡಿ ಮಾಜಿ ಕ್ರಿಕೆಟಿಗ ವೆಂಕಟೇಶ್‌ ಪ್ರಸಾದ್‌ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ದೋನಿ ಅವರ ರಾಂಚಿ ನಿವಾಸದಲ್ಲಿ ಈ ಆಟೋಮೊಬೈಲ್‌ ಕಲೆಕ್ಷನ್‌ ನೋಡಿ ತಬ್ಬಿಬ್ಬಾಗಿ ಹೋಗಿದ್ದಾರೆ. ಇತ್ತೀಚೆಗೆ ವೆಂಕಟೇಶ್‌ ಪ್ರಸಾದ್ ಅವರು ದೋನಿ ನಿವಾಸಕ್ಕೆ ಭೇಟಿ ನೀಡಿದ್ದರು.

ಈ ಬಗ್ಗೆ ವೆಂಕಟೇಶ್‌ ಪ್ರಸಾದ್ ವಿಡಿಯೊ ಟ್ವೀಟ್‌ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಒರ್ವ ವ್ಯಕ್ತಿಯಲ್ಲಿ ನೋಡಿದ ಕ್ರೇಜಿ ಪ್ಯಾಶನ್‌ಗಳಲ್ಲಿ ಇದು ಒಂದು. ಅವರ ಕ್ರಿಕೆಟ್‌ ಬದುಕು ಹಾಗೂ ಇಲ್ಲಿನ ಸಂಗ್ರಹ ನೋಡಿದರೆ ಖಂಡಿತವಾಗಿ ಧೋನಿ ಅತ್ಯದ್ಭುತ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದ್ದಾರೆ. 

ಇದು ದೋನಿ ನಿವಾಸದಲ್ಲಿರುವ ಬೈಕ್ ಮತ್ತು ಕಾರು ಸಂಗ್ರಹದ ಒಂದು ನೋಟವಾಗಿದೆ. ಇದಕ್ಕೆ ನಾನು ಮನಸೋತು ಹೋದೆ ಎಂದು ವೆಂಕಟೇಶ್ ಪ್ರಸಾದ್ ಬರೆದುಕೊಂಡಿದ್ದಾರೆ. 

ವೆಂಕಟೇಶ್‌ ಪ್ರಸಾದ್‌ ಜೊತೆ ಮತ್ತೊಬ್ಬ ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಕೂಡ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT