ಮಂಗಳವಾರ, ನವೆಂಬರ್ 12, 2019
28 °C

ಕ್ರಿಕೆಟ್‌: ವಿಶಾಲ್‌ಗೆ ಐದು ವಿಕೆಟ್‌

Published:
Updated:
Prajavani

ಬೆಂಗಳೂರು: ಎಸ್‌.ವಿಶಾಲ್‌ ಕುಮಾರ್‌ (38ಕ್ಕೆ5) ಅವರ ಮೊನಚಿನ ದಾಳಿ ಮತ್ತು ಎಸ್‌.ಚೈತನ್ಯ (ಔಟಾಗದೆ 83; 97ಎ, 4ಬೌಂ, 4ಸಿ) ಗಳಿಸಿದ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡ ವಿಜಯ್‌ ಮರ್ಚಂಟ್‌ ಟ್ರೋಫಿ 16 ವರ್ಷದೊಳಗಿನವರ ಕ್ರಿಕೆಟ್‌ ಟೂರ್ನಿಯ ಆಂಧ್ರ ಎದುರಿನ ಪಂದ್ಯದಲ್ಲಿ ಡ್ರಾ ಮಾಡಿಕೊಂಡಿದೆ.

ಆಂಧ್ರಪ್ರದೇಶದ ಒಂಗೋಲುವಿನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 85.5 ಓವರ್‌ಗಳಲ್ಲಿ 181ರನ್‌ ಗಳಿಸಿತು. ಈ ತಂಡದ ಹರಿಬಾಬು ಅಭಿನವ್‌ ಮತ್ತು ಶೇಖ್‌ ವಾಲಿ ಅವರು ಅರ್ಧಶತಕಗಳನ್ನು ದಾಖಲಿಸಿ ಗಮನ ಸೆಳೆದರು. 

ಕರ್ನಾಟಕ ತಂಡವು ಪ್ರಥಮ ಇನಿಂಗ್ಸ್‌ನಲ್ಲಿ 53 ಓವರ್‌ಗಳಲ್ಲಿ 6 ವಿಕೆಟ್‌ಗೆ 183ರನ್‌ ಕಲೆಹಾಕಿತು.

ಸಂಕ್ಷಿಪ್ತ ಸ್ಕೋರ್‌
ಆಂಧ್ರ: ಪ್ರಥಮ ಇನಿಂಗ್ಸ್‌;
85.5 ಓವರ್‌ಗಳಲ್ಲಿ 181 (ಹರಿಬಾಬು ಅಭಿನವ್‌ 55, ಶೇಖ್‌ ವಾಲಿ 54; ಎಸ್‌.ವಿಶಾಲ್‌ ಕುಮಾರ್‌ 38ಕ್ಕೆ5).

ಕರ್ನಾಟಕ: 53 ಓವರ್‌ಗಳಲ್ಲಿ 6 ವಿಕೆಟ್‌ಗೆ 183 (ಅಶ್ವಿನ್‌ ಎಸ್‌.ಸಂತೋಷ್‌ 25, ಎಸ್‌.ಚೈತನ್ಯ ಔಟಾಗದೆ 83; ಉಮಾ ಮಹೇಶ್‌ 60ಕ್ಕೆ4, ಜಿ.ಪಿ.ಗುರು 64ಕ್ಕೆ2).
ಫಲಿತಾಂಶ: ಡ್ರಾ.

ಪ್ರತಿಕ್ರಿಯಿಸಿ (+)