ಭಾನುವಾರ, ಮೇ 29, 2022
23 °C

ಎರಡನೇ ಟ್ವೆಂಟಿ20: ಇಂಗ್ಲೆಂಡ್‌ಗೆ ಮಣಿದ ವೆಸ್ಟ್ ಇಂಡೀಸ್‌

ಎಪಿ Updated:

ಅಕ್ಷರ ಗಾತ್ರ : | |

Prajavani

ಬ್ರಿಜ್‌ಟೌನ್‌: ಕೊನೆಯ ಓವರ್‌ನಲ್ಲಿ 28 ರನ್‌ ಕಬಳಿಸಿದರೂ ಗೆಲುವಿನ ದಡ ಸೇರಲು ವೆಸ್ಟ್ ಇಂಡೀಸ್ ತಂಡಕ್ಕೆ ಸಾಧ್ಯವಾಗಲಿಲ್ಲ. ಭಾನುವಾರ ರಾತ್ರಿ ಇಲ್ಲಿ ನಡೆದ ಇಂಗ್ಲೆಂಡ್ ಎದುರಿನ ಎರಡನೇ ಟ್ವೆಂಟಿ20 ಪಂದ್ಯದಲ್ಲಿ ತಂಡ ಒಂದು ರನ್‌ನಿಂದ ಸೋತಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 8ಕ್ಕೆ 171 ರನ್ ಗಳಿಸಿತ್ತು. ಎದುರಾಳಿಗಳು 13 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 78 ರನ್ ಗಳಿಸಿದ್ದಾಗ ಇಂಗ್ಲೆಂಡ್‌ ಸುಲಭ ಗೆಲುವಿನ ಭರವಸೆಯಲ್ಲಿತ್ತು. ನಂತರ ಚೇತರಿಸಿಕೊಂಡ ವೆಸ್ಟ್ ಇಂಡೀಸ್ 111 ರನ್ ಗಳಿಸುವಷ್ಟರಲ್ಲಿ ಮತ್ತೊಂದು ವಿಕೆಟ್ ಕಳೆದುಕೊಂಡಿತು. ಆದರೂ ಪಟ್ಟುಬಿಡದ ಬಾಲಂಗೋಚಿಗಳ ಸಾಹಸದಿಂದ ಗೆಲುವಿನತ್ತ ಹೆಜ್ಜೆ ಹಾಕಿತು.

10ನೇ ಕ್ರಮಾಂಕದ ಬ್ಯಾಟರ್‌ ಅಕೀಲ್ ಹೊಸೇನ್ ಕೊನೆಯ ಮೂರು ಎಸೆತಗಳಲ್ಲಿ ಮೂರು ಸಿಕ್ಸರ್ ಸಿಡಿಸಿದರು. 16 ಎಸೆತಗಳಲ್ಲಿ 44 ರನ್ (3 ಬೌಂಡರಿ, 4 ಸಿಕ್ಸರ್‌) ಗಳಿಸಿ ಅವರು ಔಟಾಗದೆ ಉಳಿದರು. ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್‌ 28 ಎಸೆತಗಳಲ್ಲಿ 44 ರನ್‌ (1 ಬೌಂ, 5 ಸಿ) ಗಳಿಸಿ ಅಜೇಯರಾಗಿ ಉಳಿದರು. ಅವರಿಬ್ಬರು 29 ಎಸೆತಗಳಲ್ಲಿ 72 ರನ್ ಸೇರಿಸಿದರು.

ಸಂಕ್ಷಿಪ್ತ ಸ್ಕೋರು: ಇಂಗ್ಲೆಂಡ್‌: 20 ಓವರ್‌ಗಳಲ್ಲಿ 8ಕ್ಕೆ 171 (ಜೇಸನ್ ರಾಯ್ 45, ಟಾಮ್‌ ಬ್ಯಾಂಟನ್ 25, ಮೋಯಿನ್ ಅಲಿ 31, ಕ್ರಿಸ್ ಜೋರ್ಡಾನ್ 27; ಶೆಲ್ಡನ್ ಕಾಟ್ರೆಲ್ 23ಕ್ಕೆ1, ಜೇಸನ್ ಹೋಲ್ಡರ್ 25ಕ್ಕೆ2, ಅಕೀಲ್ ಹೊಸೇನ್ 15ಕ್ಕೆ1, ಫ್ಯಾಬಿಯನ್ ಅಲೆನ್ 50ಕ್ಕೆ2, ಕೀರನ್ ಪೊಲಾರ್ಡ್ 32ಕ್ಕೆ1, ರೊಮಾರಿಯೊ ಶೆಫರ್ಡ್ 26ಕ್ಕೆ1); ವೆಸ್ಟ್ ಇಂಡೀಸ್‌: 20 ಓವರ್‌ಗಳಲ್ಲಿ 8ಕ್ಕೆ 170 (ನಿಕೋಲಸ್ ಪೂರನ್ 24, ಡರೆನ್ ಬ್ರಾವೊ 23, ರೊಮಾರಿಯೊ ಶೆಫರ್ಡ್‌ ಔಟಾಗದೆ 44, ಫ್ಯಾಬಿಯನ್ ಅಲೆನ್ 12, ಅಕೀಲ್ ಹೊಸೇನ್ ಔಟಾಗದೆ 44). ಫಲಿತಾಂಶ: ಇಂಗ್ಲೆಂಡ್‌ಗೆ 1 ರನ್‌ ಜಯ; 5 ಪಂದ್ಯಗಳ ಸರಣಿ 1–1ರಲ್ಲಿ ಸಮ; ಮುಂದಿನ ಪಂದ್ಯ 26ರಂದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು