ಗುರುವಾರ , ಡಿಸೆಂಬರ್ 3, 2020
21 °C

ಪ್ರತ್ಯೇಕವಾಸದ ನಿಯಮ ಉಲ್ಲಂಘನೆ: ವಿಂಡೀಸ್‌ ಕ್ರಿಕೆಟಿಗರ ಅಭ್ಯಾಸಕ್ಕೆ ತಡೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವೆಲ್ಲಿಂಗ್ಟನ್‌: ಕೋವಿಡ್‌–19 ನಿಯಂತ್ರಣದ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿದ್ದ 14 ದಿನಗಳ ಕ್ವಾರಂಟೈನ್‌ ಅವಧಿಯಲ್ಲಿ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಆಟಗಾರು ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂದಿದೆ. ಹೀಗಾಗಿ ಅವರು ಅಭ್ಯಾಸ ನಡೆಸಲು ಇದ್ದ ಅನುಮತಿಯನ್ನು ನ್ಯೂಜಿಲೆಂಡ್‌ ಸರ್ಕಾರ ಹಿಂತೆಗೆದುಕೊಂಡಿದೆ.

ಕೆರಿಬಿಯನ್‌ ತಂಡವು ಆತಿಥೇಯರ ವಿರುದ್ಧ ಮೂರು ಟ್ವೆಂಟಿ–20 ಹಾಗೂ ಎರಡು ಟೆಸ್ಟ್ ಪಂದ್ಯಗಳನ್ನು ಆಡಲು ನ್ಯೂಜಿಲೆಂಡ್‌ಗೆ ಬಂದಿಳಿದಿದೆ. ನವೆಂಬರ್‌ 27ರಿಂದ ಟಿ–20 ಪಂದ್ಯದೊಂದಿಗೆ ಸರಣಿ ಆರಂಭವಾಗಲಿದೆ.

‘ವೆಸ್ಟ್‌ ಇಂಡೀಸ್‌ ಆಟಗಾರರು ನಿಯಮಗಳನ್ನು ಉಲ್ಲಂಘಿಸಿ, ಹಜಾರದಲ್ಲಿ ಎಲ್ಲರೂ ಬೆರೆತು, ಆಹಾರವನ್ನು ಹಂಚಿಕೊಳ್ಳುತ್ತಿರುವ ದೃಶ್ಯವು ತಂಡವು ತಂಗಿರುವ ಕ್ರೈಸ್ಟ್‌ಚರ್ಚ್‌ ಹೊಟೇಲ್‌ನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆಯಾಗಿದೆ‘ ಎಂದು ನ್ಯೂಜಿಲೆಂಡ್‌ನ ಆರೋಗ್ಯ ಸಚಿವಾಲಯ ಹೇಳಿದೆ.

‘ಈ ಎಲ್ಲ ಪ್ರಕ್ರಿಯೆಗಳು ಹೊಟೇಲ್‌ ಆವರಣದೊಳಗೇ ನಡೆದಿರುವುದರಿಂದ ಸಾರ್ವಜನಿಕರಿಗೆ ಯಾವುದೇ ಅಪಾಯವಿಲ್ಲ‘ ಎಂದೂ ಆರೋಗ್ಯ ಸಚಿವಾಲಯ ತಿಳಿಸಿದೆ.

‘ಕೋವಿಡ್‌–19 ನಿಯಮಗಳ ಅನ್ವಯ ಇರುವ 14 ದಿನಗಳ ಪೈಕಿ 12 ದಿನಗಳ ಪ್ರತ್ಯೇಕವಾಸವನ್ನು ವಿಂಡೀಸ್‌ ತಂಡವು ಪೂರ್ಣಗೊಳಿಸಿದೆ. ನಿಯಮ ಉಲ್ಲಂಘಿಸಿದ ಕಾರಣ, ಸಂಪೂರ್ಣ ಅವಧಿ ಮುಗಿಯುವವರೆಗೆ ತಂಡದ ತಾಲೀಮಿಗೆ ಅವಕಾಶ ನೀಡಲಾಗಿಲ್ಲ. ಏನಾದರೂ ಕಳವಳಕಾರಿ ಘಟನೆಗಳು ನಡೆದರೆ ಕ್ವಾರಂಟೈನ್‌ ಅವಧಿಯನ್ನು ವಿಸ್ತರಿಸಲಾಗುವುದು‘ ಎಂದು ಸಚಿವಾಲಯ ಹೇಳಿದೆ.

ನಿಯಮ ಉಲ್ಲಂಘಿಸಿರುವ ಕುರಿತು ಪುರಾವೆಗಳನು ವೆಸ್ಟ್‌ ಇಂಡೀಸ್‌ ತಂಡದ ಆಡಳಿತ ಮಂಡಳಿಗೆ ಕಳುಹಿಸಲಾಗಿದೆ. ಈ ಕುರಿತು ಮಂಡಳಿಯು ಸ್ವತಃ ತನಿಖೆ ನಡೆಸಿ ಅಗತ್ಯವೆನಿಸಿದರೆ ದಂಡ ವಿಧಿಸಬಹುದಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು