ಮಂಗಳವಾರ, ನವೆಂಬರ್ 19, 2019
29 °C

ಮಿಂಚಿದ ಪೂರನ್‌, ಲೂಯಿಸ್‌: ವಿಂಡೀಸ್‌ಗೆ ಸರಣಿ ಖಾತರಿ

Published:
Updated:

ಲಖನೌ: ಅಫ್ಗಾನಿಸ್ತಾನ ತಂಡದ ಪ್ರತಿರೋಧವನ್ನು ಮೆಟ್ಟಿನಿಂತ ವೆಸ್ಟ್‌ ಇಂಡೀಸ್‌ , ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎರಡನೇ ಏಕದಿನ ಪಂದ್ಯವನ್ನು 47 ರನ್‌ಗಳಿಂದ ಗೆದ್ದುಕೊಂಡಿತು. ವಿಂಡೀಸ್‌ ತಂಡ, ಇನ್ನು ಒಂದು ಪಂದ್ಯ ಉಳಿದಿರುವಂತೆ ಸರಣಿಯಲ್ಲಿ 2–0 ಗೆಲುವಿನ ಮುನ್ನಡೆ ಪಡೆಯಿತು.‌

2014ರ ಆಗಸ್ಟ್‌ ನಂತರ ವೆಸ್ಟ್‌ ಇಂಡೀಸ್‌ ಇದೇ ಮೊದಲ ಬಾರಿ ಸರಣಿ ಗೆಲುವು ದಾಖಲಿಸಿತು. ಈ ಹಗಲು–ರಾತ್ರಿ  ಸಾವಿರಾರು ದೀಪದ ಹುಳುಗಳು ಕ್ರೀಡಾಂಗಣಕ್ಕೆ ಕೆಲಹೊತ್ತು ದಾಳಿಯಿಟ್ಟ ಕಾರಣ ಕೆಲ ವಿಂಡೀಸ್‌ ಆಟಗಾರರು ಮುಖಗವಸು ಧರಿಸಬೇಕಾಯಿತು.

ಸ್ಕೋರುಗಳು
ವೆಸ್ಟ್ ಇಂಡೀಸ್‌:
50 ಓವರುಗಳಲ್ಲಿ 9 ವಿಕೆಟ್‌ಗೆ 247 (ಶಾಯಿ ಹೋಪ್‌ 43, ನಿಕೋಲಸ್‌ ಪೂರನ್‌ 67, ಎರ್ವಿನ್‌ ಲೂಯಿಸ್‌ 54; ನವೀನ್‌ ಉಲ್‌ ಹಕ್‌ 60ಕ್ಕೆ3)
ಅಫ್ಗಾನಿಸ್ತಾನ: 45.4 ಓವರುಗಳಲ್ಲಿ 200 (ನಜೀಬುಲ್ಲಾ 56, ರೆಹಮತ್‌ 33, ನಬಿ 32; ಚೇಸ್‌ 30ಕ್ಕೆ3, ಹೇಡನ್‌ ವಾಲ್ಶ್ 36ಕ್ಕೆ3).

ಪ್ರತಿಕ್ರಿಯಿಸಿ (+)