ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2024: ಲಖನೌ ತಂಡಕ್ಕೆ ವಿಂಡೀಸ್ ವೇಗಿ ಶಮರ್ ಜೋಸೆಫ್

Published 10 ಫೆಬ್ರುವರಿ 2024, 12:58 IST
Last Updated 10 ಫೆಬ್ರುವರಿ 2024, 12:58 IST
ಅಕ್ಷರ ಗಾತ್ರ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧ ಹೆಚ್ಚುಕಮ್ಮಿ ಏಕಾಂಗಿಯಾಗಿ ಟೆಸ್ಟ್ ಪಂದ್ಯ ಗೆಲ್ಲಿಸಿಕೊಟ್ಟಿದ್ದ ವೆಸ್ಟ್‌ ಇಂಡೀಸ್ ಕ್ರಿಕೆಟ್‌ನ ಭರವಸೆಯ ವೇಗಿ ಶಮರ್ ಜೋಸೆಫ್ ಅವರನ್ನು ಮುಂದಿನ ಟಾಟಾ ಐಪಿಎಲ್‌ಗೆ ಲಖನೌ ಸೂಪರ್‌ ಜೈಂಟ್ಸ್ ತಂಡ ಶನಿವಾರ ಸೆಳೆದುಕೊಂಡಿದೆ. ಅವರು ಇಂಗ್ಲೆಂಡ್ ವೇಗಿ ಮಾರ್ಕ್ ವುಡ್‌ ಸ್ಥಾನವನ್ನು ತುಂಬಲಿದ್ದಾರೆ.

24 ವರ್ಷದ ಜೋಸೆಫ್ ಕಳೆದ ತಿಂಗಳು ಬ್ರಿಸ್ಬೇನ್‌ನಲ್ಲಿ ನಡೆದ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 68 ರನ್ನಿಗೆ 7 ವಿಕೆಟ್‌ ಪಡೆದು ಪ್ರಬಲ ಬ್ಯಾಟರ್‌ಗಳಿದ್ದ ಆಸ್ಟ್ರೇಲಿಯಾ ಸರದಿಯನ್ನು ಧ್ವಂಸ ಮಾಡಿದ್ದರು. ಹೀಗಾಗಿ ಅವರ ಮೇಲೆ ವಿಶ್ವದ ಕಣ್ಣು ನೆಟ್ಟಿದೆ. ಅವರು ₹3 ಕೋಟಿಗೆ ಎಲ್‌ಎಸ್‌ಜಿ ಸೇರಿಕೊಳ್ಳಲಿದ್ದಾರೆ. ಅವರ ಪಾಲಿಗೆ ಇದು ಮೊದಲ ಐಪಿಎಲ್‌.

ಹೀಗಾಗಿ ಮಾರ್ಕ್‌ ವುಡ್‌ ಐಪಿಎಲ್‌ಗೆ ಅಲಭ್ಯರಾಗುವುದು ಖಚಿತವಾಗಿದೆ. ಕಾರಣ ತಿಳಿದುಬಂದಿಲ್ಲ. ಅವರು ಭಾರತ ವಿರುದ್ಧ ಹಾಲಿ ಐದು ಟೆಸ್ಟ್‌ ಪಂದ್ಯಗಳ ಸರಣಿ ಆಡುತ್ತಿರುವ ಇಂಗ್ಲೆಂಡ್ ತಂಡದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT