ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮನ್ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ತಂಡ

Last Updated 17 ಏಪ್ರಿಲ್ 2021, 7:52 IST
ಅಕ್ಷರ ಗಾತ್ರ

ನವದೆಹಲಿ: ಲಾಸ್ ಏಂಜಲೀಸ್‌ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಳಿಸಿದರೆ ಪುರುಷರ ಮತ್ತು ಮಹಿಳೆಯರ ತಂಡಗಳನ್ನು ಕಳುಹಿಸಲು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧರಿಸಿದೆ.

ಶುಕ್ರವಾರ ವರ್ಚುವಲ್ ಆಗಿ ನಡೆದ ಅಪೆಕ್ಸ್ ಸಮಿತಿ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದ್ದು 2022ರ ಕಾಮನ್ವೆಲ್ತ್ ಗೇಮ್ಸ್‌ಗೆ ಮಹಿಳಾ ಕ್ರಿಕೆಟ್ ತಂಡವನ್ನು ಕಳುಹಿಸುವುದಕ್ಕೂ ನಿರ್ಧರಿಸಲಾಯಿತು.

ಈ ವರ್ಷಾಂತ್ಯದಲ್ಲಿ ಭಾರತ ಮಹಿಳೆಯರ ಏಕದಿನ ಮತ್ತು ಟಿ20 ತಂಡಗಳ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ ಪ್ರವಾಸಕ್ಕೂ ಹಸಿರು ನಿಶಾನೆ ತೋರಿಸಲಾಯಿತು ಎಂದು ಬಿಸಿಸಿಐ ಹಿರಿಯ ಪದಾಧಿಕಾರಿಯೊಬ್ಬರು ತಿಳಿಸಿದರು.

ಕಳೆದ ಬಾರಿಯಂತೆಯೇ ಈ ಬಾರಿಯೂ ಮಹಿಳೆಯರ ಟಿ20 ಚಾಲೆಂಜ್‌ಗೂ ಮೊದಲು ಆಟಗಾರ್ತಿಯರ ತರಬೇತಿ ಶಿಬಿರವೊಂದು ನಡೆಯಲಿದೆ. ಚಾಲೆಂಜ್ ನಂತರ ತಂಡ ಇಂಗ್ಲೆಂಡ್‌ಗೆ ಪಯಣಿಸಲಿದೆ. ತವರಿಗೆ ವಾಪಸಾದ ನಂತರ ವೆಸ್ಟ್ ಇಂಡೀಸ್ ಅಥವಾ ದಕ್ಷಿಣ ಆಫ್ರಿಕಾ ತಂಡಗಳು ಇಲ್ಲಿಗೆ ಬರಲಿವೆ.

ಮಹಿಳೆಯರ ಏಕದಿನ ಮತ್ತು ಟಿ20 ದೇಶಿ ಟೂರ್ನಿಗಳನ್ನು ಪೂರ್ಣಪ್ರಮಾಣದಲ್ಲಿ ಆಯೋಜಿಸುವದಕ್ಕೂ ನಿರ್ಧರಿಸಲಾಯಿತು. ಆದರೆ ಪುರುಷರ ಟೂರ್ನಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿಲ್ಲ. ಅನಧಿಕೃತವಾಗಿ ಟಿ20 ಲೀಗ್ ಆಯೋಜಿಸಿದ ಬಿಹಾರ ಕ್ರಿಕೆಟ್ ಸಂಸ್ಥೆಗೆ ಕಾರಣ ಕೇಳಿ ನೋಟಿಸ್ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT