ಲಂಕಾಗೆ ಮಣಿದ ಭಾರತ

7
ಮಹಿಳಾ ಏಕದಿನ ಕ್ರಿಕೆಟ್‌ ಪಂದ್ಯ: ಮಿಥಾಲಿ ರಾಜ್‌ ವೈಯಕ್ತಿಕ ಗರಿಷ್ಠ ರನ್‌

ಲಂಕಾಗೆ ಮಣಿದ ಭಾರತ

Published:
Updated:
Deccan Herald

ಕತುನಾಯಕೆ, ಶ್ರೀಲಂಕಾ: ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ (ಔಟಾಗದೆ 125; 143ಎ, 14ಬೌಂ, 1ಸಿ) ಭಾನುವಾರ ಏಕದಿನ ಮಾದರಿಯಲ್ಲಿ ವೈಯಕ್ತಿಕ ಗರಿಷ್ಠ ರನ್‌ ದಾಖಲಿಸಿದ ಸಾಧನೆ ಮಾಡಿದರು.

ಹೀಗಿದ್ದರೂ ಭಾರತ ತಂಡ ಐಸಿಸಿ ಮಹಿಳಾ ಚಾಂಪಿಯನ್‌ಷಿಪ್‌ನ ಶ್ರೀಲಂಕಾ ಎದುರಿನ ಮೂರನೇ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳಿಂದ ಸೋತಿತು.

ಎಫ್‌.ಟಿ.ಜೆಡ್‌ ಕ್ರೀಡಾ ಸಂಕೀರ್ಣದ ಮೈದಾನದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ಗೆ 253ರನ್‌ ದಾಖಲಿಸಿತು. 254ರನ್‌ಗಳ ಗೆಲುವಿನ ಗುರಿಯನ್ನು ಸಿಂಹಳೀಯ ನಾಡಿನ ತಂಡ 49.5 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್‌ ಆರಂಭಿಸಿದ ಭಾರತ ತಂಡ ಮೊದಲ ಓವರ್‌ನಲ್ಲಿ ಜೆಮಿಮಾ ರಾಡ್ರಿಗಸ್‌ (0) ವಿಕೆಟ್‌ ಕಳೆದುಕೊಂಡಿತು. ನಂತರ ನಾಯಕಿ ಮಿಥಾಲಿ ಮತ್ತು ಸ್ಮೃತಿ ಮಂದಾನ 51; 62ಎ, 6ಬೌಂ) ಅಮೋಘ ಜೊತೆಯಾಟ ಆಡಿದರು. ಇವರು ಎರಡನೇ ವಿಕೆಟ್‌ಗೆ 102ರನ್‌ ದಾಖಲಿಸಿದರು. ಮಿಥಾಲಿ, ಏಕದಿನ ಮಾದರಿಯಲ್ಲಿ ಏಳನೇ ಶತಕ ಗಳಿಸಿದ ಶ್ರೇಯಕ್ಕೂ ಪಾತ್ರರಾದರು.

ದೀಪ್ತಿ ಶರ್ಮಾ (38; 44ಎ, 4ಬೌಂ) ತಂಡದ ಮೊತ್ತ ಹೆಚ್ಚಿಸಲು ನೆರವಾದರು.

ಗುರಿ ಬೆನ್ನಟ್ಟಿದ ಲಂಕಾ ತಂಡಕ್ಕೆ ಹಾಸಿನಿ ಪೆರೇರಾ (45; 70ಎ, 4ಬೌಂ, 2ಸಿ) ಮತ್ತು ನಾಯಕಿ ಚಾಮರಿ ಅಟಪಟ್ಟು (115; 133ಎ, 13ಬೌಂ, 4ಸಿ) ದಿಟ್ಟ ಆರಂಭ ನೀಡಿದರು. ಇವರು ಔಟಾದ ನಂತರ ಆತಿಥೇಯರು ಕುಸಿತದ ಹಾದಿ ಹಿಡಿದರು. ಕೊನೆಯ ಓವರ್‌ನಲ್ಲಿ ಲಂಕಾ ತಂಡದ ಗೆಲುವಿಗೆ ಆರು ರನ್‌ಗಳು ಬೇಕಿದ್ದವು. ದೀಪ್ತಿ ಶರ್ಮಾ ಹಾಕಿದ ಓವರ್‌ನ ಐದನೇ ಎಸೆತವನ್ನು ಕವಿಶಾ ದಿಲಹಾರಿ (ಔಟಾಗದೆ 12; 7ಎ, 2ಬೌಂ) ಬೌಂಡರಿಗೆ ಅಟ್ಟಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌

ಭಾರತ – 50 ಓವರ್‌ಗಳಲ್ಲಿ 5 ವಿಕೆಟ್‌ಗೆ 253: (ಸ್ಮೃತಿ ಮಂದಾನ 51, ಮಿಥಾಲಿ ರಾಜ್‌ ಔಟಾಗದೆ 125, ಹರ್ಮನ್‌ಪ್ರೀತ್‌ ಕೌರ್ 17, ದೀಪ್ತಿ ಶರ್ಮಾ 38; ಉದೇಶಿಕಾ ಪ್ರಬೋಧನಿ 20ಕ್ಕೆ1, ಚಾಮರಿ ಅಟಪಟ್ಟು 25ಕ್ಕೆ1).

ಶ್ರೀಲಂಕಾ – 49.5 ಓವರ್‌ಗಳಲ್ಲಿ 7 ವಿಕೆಟ್‌ಗೆ 257: (ಹಾಸಿನಿ ಪೆರೇರಾ 45, ಚಾಮರಿ ಅಟಪಟ್ಟು 115, ಅನುಷ್ಕಾ ಸಂಜೀವನಿ 22, ನೀಲಾಕ್ಷಿ ಡಿಸಿಲ್ವ 15; ಜೂಲನ್‌ ಗೋಸ್ವಾಮಿ 39ಕ್ಕೆ2, ಮಾನಸಿ ಜೋಷಿ 43ಕ್ಕೆ2, ದಯಾಳನ್‌ ಹೇಮಲತಾ 16ಕ್ಕೆ1).

ಫಲಿತಾಂಶ: ಶ್ರೀಲಂಕಾ ತಂಡಕ್ಕೆ 3 ವಿಕೆಟ್‌ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !