ಶನಿವಾರ, ಜೂನ್ 25, 2022
25 °C
ಹರ್ಮನ್‌ಪ್ರೀತ್ ಕೌರ್ ಅರ್ಧಶತಕ

ಮಹಿಳೆಯರ ಟಿ20 ಕ್ರಿಕೆಟ್ ಚಾಲೆಂಜರ್ಸ್ ಟೂರ್ನಿ: ಶಫಾಲಿ ಮಿಂಚು‍; ವೆಲೊಸಿಟಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಶಫಾಲಿ ವರ್ಮಾ ಮತ್ತು ಲಾರಾ ವಾಲ್ವ್‌ವಾರ್ಡಿತ್ ಅವರ ಅರ್ಧಶತಕಗಳ ಬಲದಿಂದ ವೆಲೊಸಿಟಿ ತಂಡವು ಮಹಿಳೆಯರ ಟಿ20 ಕ್ರಿಕೆಟ್ ಚಾಲೆಂಜರ್ಸ್ ಟೂರ್ನಿಯ ಪಂದ್ಯದಲ್ಲಿ ಮಂಗಳವಾರ ಜಯಸಾಧಿಸಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ವೆಲೊಸಿಟಿ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹರ್ಮನ್‌ಪ್ರೀತ್ ಕೌರ್ (71; 51ಎ, 4X7, 6X3) ಅವರ ಅರ್ಧಶತಕದ ಬಲದಿಂದ ಸೂಪರ್‌ನೋವಾಸ್ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 150 ರನ್ ಗಳಿಸಿತು. 

ಗುರಿ ಬೆನ್ನಟ್ಟಿದ ವೆಲೊಸಿಟಿ ತಂಡವು 18.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 151 ರನ್ ಗಳಿಸಿತು. ಏಳು ವಿಕೆಟ್‌ಗಳಿಂದ ಜಯ ದಾಖಲಿಸಿತು.  ಆರಂಭಿಕ ಬ್ಯಾಟರ್ ಶೆಫಾಲಿ (51; 33ಎ, 4X9, 6X1) ಮತ್ತು ಲಾರಾ (51; 35ಎ, 4X7, 6X1) ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 

ಸಂಕ್ಷಿಪ್ತ ಸ್ಕೋರು
ಸೂಪರ್‌ನೋವಾಸ್:
20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 150 (ತಾನಿಯಾ ಭಾಟಿಯಾ 36, ಹರ್ಮನ್‌ಪ್ರೀತ್ ಕೌರ್ 71, ಸುನ್ ಲೂಸ್ ಔಟಾಗದೆ 20, ಕೇಟ್ ಕ್ರಾಸ್ 24ಕ್ಕೆ2, ದೀಪ್ತಿ ಶರ್ಮಾ 31ಕ್ಕೆ1)

ವೆಲೊಸಿಟಿ: 18.2 ಓವರ್‌ಗಳಲ್ಲಿ 3ಕ್ಕೆ151 (ಶೆಫಾಲಿ ವರ್ಮಾ 51, ಯಷ್ಟಿಕಾ ಭಾಟಿಯಾ 17, ಲಾರಾ ವೊಲ್‌ವಾರ್ಡೆಟ್ ಔಟಾಗದೆ 51, ದೀಪ್ತಿ ಶರ್ಮಾ ಔಟಾಗದೆ 24, ದಿಯಾಂದ್ರ ಡಾಟಿನ್ 21ಕ್ಕೆ2)

ಫಲಿತಾಂಶ: ವೆಲೊಸಿಟಿ ತಂಡಕ್ಕೆ 7 ವಿಕೆಟ್‌ಗಳ ಜಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು