ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್‌ ಹಬ್ಬ ಆರಂಭ: ಟಾಸ್‌ ಗೆದ್ದ ಆಫ್ರಿಕಾ ಬೌಲಿಂಗ್‌ ಆಯ್ಕೆ

Last Updated 30 ಮೇ 2019, 9:59 IST
ಅಕ್ಷರ ಗಾತ್ರ

ಲಂಡನ್‌:ಓವಲ್‌ ಕ್ರೀಡಾಂಗಣದಲ್ಲಿವಿಶ್ವಕಪ್‌ ಕ್ರಿಕೆಟ್‌ ಹಬ್ಬ ಆರಂಭವಾಗಿದ್ದುಉದ್ಘಾಟನಾ ಪಂದ್ಯದಲ್ಲಿ ದಕ್ಷಿಣಆಫ್ರಿಕಾ ತಂಡ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದುಆತಿಥೇಯ ಇಂಗ್ಲೆಂಡ್‌ ಮೊದಲು ಬ್ಯಾಟ್‌ ಮಾಡುತ್ತಿದೆ.

ಇತ್ತೀಚಿನ ವರದಿ ಬಂದಾಗ ಇಂಗ್ಲೆಂಡ್‌ 12 ರನ್‌ಗಳಿಗೆ 1 ವಿಕೆಟ್‌ ಕಳೆದುಕೊಂಡಿದೆ. ಇಮ್ರಾನ್‌ ತಾಹೀರ್‌ ಅವರುಜಾನಿ ಬೇಸ್ಟೊ ಅವರನ್ನು ಶೂನ್ಯಕ್ಕೆ ಔಟ್‌ ಮಾಡಿದರು.

ಕಳೆದ ಬಾರಿಯ ಟೂರ್ನಿಯಲ್ಲಿ ಮೊದಲ ಸುತ್ತಿನಲ್ಲೇ ಹೊರ ಬಿದ್ದ ಇಂಗ್ಲೆಂಡ್‌ ತಂಡದ ತವರಿನಲ್ಲೇ ಈ ಬಾರಿ ಟೂರ್ನಿ ನಡೆಯುತ್ತಿದೆ. ಒಮ್ಮೆಯೂ ವಿಶ್ವಕಪ್‌ ಗೆಲ್ಲಲು ಸಾಧ್ಯವಾಗದ ಇಂಗ್ಲೆಂಡ್‌ ಈ ಬಾರಿ ಪ್ರಶಸ್ತಿಯ ಮೇಲೆ ಕಣ್ಣಿಟಿದ್ದು ಇದರ ಮೊದಲ ಹೆಜ್ಜೆಯಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಗೆದ್ದು ಮೊದಲ ವಿಜಯ ದಾಖಲಿಸುವ ಹವಣಿಕೆಯಲ್ಲಿದೆ.

ಇಯಾನ್ ಮಾರ್ಗನ್ ಬಳಗ ಈಗ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನಕ್ಕೇರಿದೆ. ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ (6ಕ್ಕೆ481) ಕಲೆ ಹಾಕಿದ ದಾಖಲೆಯನ್ನೂ ತನ್ನದಾಗಿಸಿಕೊಂಡಿದೆ. ಹೀಗಾಗಿ ತವರಿನಲ್ಲಿ ಗೆಲುವಿಗೆ ನಾಂದಿ ಹಾಡುವ ತವಕದಲ್ಲಿದೆ.ವಿಶ್ವಕಪ್ ಟೂರ್ನಿಯಲ್ಲಿ ಅನೇಕ ಬಾರಿ ಗೆಲುವಿನ ಹೆಬ್ಬಾಗಿಲಲ್ಲಿ ಎಡವಿರುವ ದಕ್ಷಿಣ ಆಫ್ರಿಕಾ ಕೂಡ ಮೊದಲ ಪಂದ್ಯವನ್ನು ಗೆದ್ದು ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿದೆ

ಬ್ಯಾಟಿಂಗ್ ಇಂಗ್ಲೆಂಡ್ ತಂಡದ ಬಲ. ಜೇಸನ್ ರಾಯ್, ಜಾನಿ ಬೇಸ್ಟೊ, ಜೋ ರೂಟ್‌, ಇಯಾನ್ ಮಾರ್ಗನ್ ಮತ್ತು ಜೋಸ್ ಬಟ್ಲರ್‌ ಅವರು ಯಾವುದೇ ಸಂದರ್ಭದಲ್ಲಿ ಪಂದ್ಯಕ್ಕೆ ತಿರುವು ನೀಡಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಇನ್ನು ಹರಿಣಿಗಳ ಪರವಾಗಿಫಾಫ್‌ ಡು ಪ್ಲೆಸಿ (ನಾಯಕ), ಹಾಶಿಂ ಆಮ್ಲಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್‌), ಜೆ.ಪಿ.ಡುಮಿನಿ ಉತ್ತಮ ಫಾರ್ಮ್‌ನಲ್ಲಿ ಇದ್ದಾರೆ.

ತಂಡಗಳು

ಇಂಗ್ಲೆಂಡ್‌: ಇಯಾನ್ ಮಾರ್ಗನ್ (ನಾಯಕ), ಮೋಯಿನ್ ಅಲಿ, ಜೊಫ್ರಾ ಆರ್ಚರ್‌, ಜಾನಿ ಬೇಸ್ಟೊ, ಜೋಸ್ ಬಟ್ಲರ್‌ (ವಿಕೆಟ್ ಕೀಪರ್‌), ಲಿಯಾಮ್ ಪ್ಲಂಕೆಟ್‌, ಆದಿಲ್ ರಶೀದ್, ಜೋ ರೂಟ್, ಜೇಸನ್‌ ರಾಯ್‌, ಕ್ರಿಸ್ ವೋಕ್ಸ್‌.

ದಕ್ಷಿಣ ಆಫ್ರಿಕಾ: ಫಾಫ್‌ ಡು ಪ್ಲೆಸಿ (ನಾಯಕ), ಹಾಶಿಂ ಆಮ್ಲಾ, ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್‌), ಜೆ.ಪಿ.ಡುಮಿನಿ, ಏಡನ್ ಮರ್ಕರಮ್‌, ಲುಂಗಿ ಗಿಡಿ, ಆ್ಯಂಡಿಲೆ ಪಿಶುವಾಯೊ, ಡ್ವಾಲ್ನೆ ಪ್ರೆಟೋರಿಯಸ್‌, ಕಗಿಸೊ ರಬಾಡ, ಇಮ್ರಾನ್ ತಾಹಿರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT