ಸಹಾ ಉತ್ತಮ ವಿಕೆಟ್ ಕೀಪರ್‌: ಗಂಗೂಲಿ

7

ಸಹಾ ಉತ್ತಮ ವಿಕೆಟ್ ಕೀಪರ್‌: ಗಂಗೂಲಿ

Published:
Updated:
Deccan Herald

ಕೋಲ್ಕತ್ತ: ‘ಭುಜದ ನೋವಿನಿಂದ ವೃದ್ಧಿಮಾನ್ ಸಹಾ ಬಳಲುತ್ತಿರಬಹುದು. ಆದರೆ 10 ವರ್ಷಗಳಿಂದ ಅವರು ಭಾರತದ ಉತ್ತಮ ವಿಕೆಟ್ ಕೀಪರ್ ಆಗಿ ಮಿಂಚಿದ್ದಾರೆ’ ಎಂದು ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಅಭಿಪ್ರಾಯಪಟ್ಟರು.

2014ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಮಹೇಂದ್ರ ಸಿಂಗ್ ಧೋನಿ ವಿದಾಯ ಹೇಳಿದ ನಂತರ ವೃದ್ಧಿಮಾನ್ ಸಹಾ ಗಮನ ಸೆಳೆದಿದ್ದರು. ಇತ್ತೀಚೆಗೆ ಭುಜದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ಡಿಸೆಂಬರ್‌ನಲ್ಲಿ ಕೋಲ್ಕತ್ತ ಪರ ರಣಜಿ ಪಂದ್ಯ ಆಡುವ ಸಾಧ್ಯತೆ ಇದೆ.

‘ಡೈವ್ ಮಾಡುವುದರಿಂದ ವಿಕೆಟ್‌ಕೀಪರ್‌ಗಳು ಗಾಯಗೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಗುಣಮುಖರಾಗಲು ಆಟಗಾರರಿಗೆ ಸಮಯ ಬೇಕಾಗುತ್ತದೆ. ಎಷ್ಟು ಬೇಗ ಗುಣಮುಖರಾಗುತ್ತಾರೆಯೋ ಅಷ್ಟು ಒಳ್ಳೆಯದು’ ಎಂದು ಗಂಗೂಲಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !