ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವರಾಜಗೆ ಗೌರವಯುತವಾಗಿ ಬೀಳ್ಕೊಡಬೇಕಿತ್ತು: ಕಪಿಲ್ ದೇವ್

Last Updated 12 ಜೂನ್ 2019, 17:51 IST
ಅಕ್ಷರ ಗಾತ್ರ

ನವದೆಹಲಿ: ಯುವರಾಜ್ ಸಿಂಗ್ ಅವರಂತಹ ಶ್ರೇಷ್ಠ ಆಟಗಾರನಿಗೆ ಗೌರವಯುತವಾದ ಬೀಳ್ಕೊಡುಗೆ ನೀಡಬೇಕಿತ್ತು ಎಂದು ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಹೇಳಿದ್ದಾರೆ.

37 ವರ್ಷದ ಕ್ರಿಕೆಟಿಗ ಯುವರಾಜ್ ಸಿಂಗ್ ಅವರು ಸೋಮವಾರ ನಿವೃತ್ತಿ ಘೋಷಿಸಿದ್ದರು.

‘ನನ್ನ ಇಲೆವನ್ ತಂಡದಲ್ಲಿ ಯುವರಾಜ್ ಸಿಂಗ್ ಸದಾ ಇರುತ್ತಾರೆ. ಅವರಂತಹ ಅಪ್ರತಿಮ ಆಟಗಾರನಿಗೆ ಕ್ರೀಡಾಂಗಣದಲ್ಲಿ ಬೀಳ್ಕೊಡುಗೆ ನೀಡಬೇಕು’ ಎಂದು ಬುಧವಾರ ಇಲ್ಲಿ ಫ್ಯಾಂಟಸಿ ಸ್ಪೋರ್ಟ್ಸ್‌ ಪ್ಲಾಟ್‌ಫಾರ್ಮ್ ‘ಅಪ್ನೆ ಇಲೆವನ್‌’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಅವರು ಕ್ರಿಕೆಟ್‌ನಲ್ಲಿ ಬೆಳಗಿದ ರೀತಿ. ಜೀವನದಲ್ಲಿ ಕ್ಯಾನ್ಸರ್‌ ಕಾಯಿಲೆಯನ್ನು ಎದುರಿಸಿ ನಿಂತ ಪರಿ ಎಲ್ಲರಿಗೂ ಪ್ರೇರಣಾದಾಯಕ. ಮುಂದಿನ ದಿನ ಗಳಲ್ಲಿ ಅವರುಇನ್ನು ಉತ್ತಮವಾಗಿ ಜೀವನ ಮಾಡಲಿ. ಕ್ರಿಕೆಟ್‌ ಜೀವನದಲ್ಲಿ ಮಾಡಿದ್ದಕ್ಕಿಂತಲೂ ದೊಡ್ಡ ಸಾಧನೆ ಮಾಡಲಿ’ ಎಂದು ಕಪಿಲ್ ಹಾರೈಸಿದರು.

ಈ ಹಿಂದೆ ದಿಗ್ಗಜ ಕ್ರಿಕೆಟಿಗರಾದ ವೀರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಲಕ್ಷ್ಮಣ್ ಮತ್ತು ಗೌತಮ್ ಗಂಭೀರ್ ಅವರಿಗೂ ವಿದಾಯದ ಪಂದ್ಯವಾಡಿಸಿರಲಿಲ್ಲ. ಈಗ ಆ ಸಾಲಿಗೆ ಯುವರಾಜ್ ಸಿಂಗ್ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT