ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕೋಚ್ ಹುದ್ದೆಗೆ ಮನೋಜ್‌ ಪ್ರಭಾಕರ್ ಅರ್ಜಿ

Last Updated 9 ಡಿಸೆಂಬರ್ 2018, 19:34 IST
ಅಕ್ಷರ ಗಾತ್ರ

ನವದೆಹಲಿ : ಭಾರತ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗೆ ಹಿರಿಯ ಕ್ರಿಕೆಟಿಗ ಮನೋಜ್ ಪ್ರಭಾಕರ್ ಅವರು ಅರ್ಜಿ ಸಲ್ಲಿಸಿದ್ದಾರೆ.

ಎರಡು ದಶಕಗಳ ಹಿಂದೆ ಮನೋಜ್ ಅವರು ಭಾರತ ತಂಡದ ಆಲ್‌ರೌಂಡರ್ ಆಗಿದ್ದರು. ಆ ಸಂದರ್ಭದಲ್ಲಿ ಅವರು ಕಪಿಲ್ ದೇವ್ ಅವರೊಂದಿಗೆ ಆಡಿದ್ದರು. ಇದೀಗ ಕೋಚ್ ಆಯ್ಕೆ ಸಮಿತಿಗೆ ಕಪಿಲ್ ದೇವ್ ಮುಖ್ಯಸ್ಥರಾಗಿದ್ದಾರೆ. ಈ ಸಮಿತಿಯಲ್ಲಿ ಅನ್ಷುಮನ್ ಗಾಯಕವಾಡ್ ಮತ್ತು ಶಾಂತಾ ರಂಗಸ್ವಾಮಿ ಇದ್ದಾರೆ. ಆದ್ದರಿಂದ ಪ್ರಭಾಕರ್ ಅವರನ್ನು ಕಪಿಲ್ ಅವರೇ ಸಂದರ್ಶಿಸಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

2000ನೇ ಇಸವಿಯಲ್ಲಿ ನಡೆದಿದ್ದ ಮ್ಯಾಚ್‌ ಫಿಕ್ಸಿಂಗ್ ವಿವಾದದಲ್ಲಿ ಪ್ರಭಾಕರ್ ವಿಚಾರಣೆಗೊಳಗಾಗಿದ್ದರು. ಆಗ ಅವರು ಕಪಿಲ್ ಹೆಸರನ್ನೂ ಎಳೆದು ತಂದಿದ್ದರು. ಆಗ ಸಂದರ್ಶನವೊಂದರಲ್ಲಿ ಕಪಿಲ್ ಕಣ್ಣೀರು ಹಾಕಿ, ತಾವು ನಿರಪರಾಧಿ ಎಂದಿದ್ದರು. ಈ ವಿಷಯವು ದೊಡ್ಡ ಸದ್ದು ಮಾಡಿತ್ತು.

ಈಚೆಗೆ ನಡೆದ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಕೋಚ್ ಆಗಿದ್ದ ರಮೇಶ್ ಪೊವಾರ್ ಅವರ ಕಾರ್ಯಾವಧಿಯು ಈಚೆಗೆ ಮುಗಿದಿತ್ತು. ನೂತನ ಕೋಚ್ ನೇಮಕಕ್ಕೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಅರ್ಜಿ ಸಲ್ಲಿಸಲು ಡಿಸೆಂಬರ್ 14 ಕೊನೆಯ ದಿನವಾಗಿದೆ. ದಕ್ಷಿಣ ಆಫ್ರಿಕಾದ ಆಟಗಾರ ಹರ್ಷಲ್ ಗಿಬ್ಸ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT