ಫುಟ್‌ಬಾಲ್‌: ಯಂಗ್‌ ಬಾಯ್ಸ್‌, ಲಕ್ಕಿ ಸ್ಟಾರ್‌ಗೆ ಜಯ

ಶುಕ್ರವಾರ, ಏಪ್ರಿಲ್ 19, 2019
30 °C

ಫುಟ್‌ಬಾಲ್‌: ಯಂಗ್‌ ಬಾಯ್ಸ್‌, ಲಕ್ಕಿ ಸ್ಟಾರ್‌ಗೆ ಜಯ

Published:
Updated:

ಬೆಂಗಳೂರು: ಯಂಗ್‌ ಬಾಯ್ಸ್ ಎಫ್‌ಸಿ, ನ್ಯೂ ಲಕ್ಕಿ ಸ್ಟಾರ್ ಎಫ್‌ಸಿ ಮತ್ತು ಫ್ರೆಂಡ್ಸ್ ಯೂನಿಯನ್‌ ಎಫ್‌ಸಿ ತಂಡಗಳು ಬಿಡಿಎಫ್‌ಎ ಆಶ್ರಯದ ‘ಸಿ’ ಡಿವಿಷನ್‌ ಲೀಗ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ಭರ್ಜರಿ ಜಯ ಗಳಿಸಿದವು. ಕ್ವೀನ್ಸ್‌ ಸ್ಟಾರ್‌ ಎಫ್‌ಸಿ ಎದುರಿನ ಪಂದ್ಯದಲ್ಲಿ ಯಂಗ್‌ ಬಾಯ್ಸ್‌ 4–2ರಿಂದ ಗೆದ್ದಿತು. ವಿಜಯಿ ತಂಡಕ್ಕಾಗಿ ಎಬೆಜರ್‌ (8ನೇ ನಿಮಿಷ), ಅನುರಾಗ್‌ (11, 12, 23ನೇ ನಿ) ಗೋಲು ಗಳಿಸಿದರು. ಕ್ವೀನ್ ಸ್ಟಾರ್‌ ಎಫ್‌ಸಿ ಪರವಾಗಿ ಮುಕೇಶ್‌ (38ನೇ ನಿ) ಮತ್ತು ಸಂದೀಪ್‌ (41ನೇ ನಿ) ಚೆಂಡನ್ನು ಗುರಿ ಮುಟ್ಟಿಸಿದರು.

ನ್ಯೂ ಲಕ್ಕಿ ಸ್ಟಾರ್‌ ತಂಡ 4–0ಯಿಂದ ವಿವೇಕಾನಂದ ಎಫ್‌ಸಿಯನ್ನು ಸೋಲಿಸಿತು. ವಿಕ್ರಂ (33ನೇ ನಿ), ಆಲ್ಬರ್ಟ್‌ (45ನೇ ನಿ), ಪ್ರಶಾಂತ್‌ (48ನೇ ನಿ), ಎಲ್‌.ನಾರಾಯಣ (57ನೇ ನಿ) ಗೋಲು ಗಳಿಸಿದರು.

ಫ್ರೆಂಡ್ಸ್‌ ಯೂನಿಯನ್ ಎಫ್‌ಸಿ ತಂಡ ಬೆಂಗಳುರು ವಾರಿಯರ್ಸ್ ಎದುರು 3–0ಯಿಂದ ಗೆದ್ದಿತು. ಅನ್ಬು (4ನೇ ನಿ),  ಧನುಷ್‌ (18ನೇ ನಿ) ಮತ್ತು ಭರತ್‌ (40ನೇ ನಿ) ಗೋಲು ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !