ಶನಿವಾರ, ಸೆಪ್ಟೆಂಬರ್ 19, 2020
27 °C

ಲೂಕಾ ಮೋಡ್ರಿಕ್‌ಗೆ 2018ನೇ ಸಾಲಿನ ಬಾಲನ್ ಡಿ'ಓರ್ ಪ್ರಶಸ್ತಿ   

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ಯಾರಿಸ್ : ರಿಯಲ್ ಮ್ಯಾಡ್ರಿಡ್ ಮತ್ತು ಕ್ರೊವೇಷಿಯಾ ಮಿಡ್ ಫೀಲ್ಡರ್ ಲೂಕಾ ಮೋಡ್ರಿಕ್ 2018 ನೇ ಸಾಲಿನ ಬಾಲನ್ ಡಿ'ಓರ್ ಪ್ರಶಸ್ತಿ ಗಳಿಸಿದ್ದಾರೆ. ಫುಟ್ಬಾಲ್ ಲೋಕದ ದಂತಕತೆಗಳಾದ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತು ಲಯೊನೆಲ್‌ ಮೆಸ್ಸಿ ಅವರ ದಶಕದ ಪಾರಮ್ಯ ಮುರಿದು ಲೂಕಾ ಈ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. 

ಫಿಫಾ ವಿಶ್ವ ಫುಟ್ಬಾಲರ್ ಪ್ರಶಸ್ತಿಗಳಿಸಿದ  ಬೆನ್ನಲ್ಲೇ ಲೂಕಾ ಅವರಿಗೆ ಪ್ರಶಸ್ತಿ ದಕ್ಕಿದೆ. ಫ್ರಾನ್ಸ್ ಫುಟ್ಬಾಲ್ ನಿಯತಕಾಲಿಕ ನೀಡುವ ಈ ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಲಾಗಿದೆ. 

ಜಗತ್ತಿನಾದ್ಯಂತವಿರುವ ಕ್ರೀಡಾ ಪತ್ರಕರ್ತರು ಮತದಾನ ಮಾಡುವ ಮೂಲಕ 30 ಫುಟ್ಬಾಲ್ ಆಟಗಾರರ ಪಟ್ಟಿಯಿಂದ ಲೂಕಾ ಅವರನ್ನು ಆಯ್ಕೆ ಮಾಡಿದ್ದಾರೆ. ಲೂಕಾ ಅವರಿಗೆ 753 ಅಂಕಗಳು ಲಭಿಸಿದ್ದು, ಎರಡನೇ ಸ್ಥಾನದಲ್ಲಿರುವ  ಕ್ರಿಸ್ಟಿಯಾನೊ ರೊನಾಲ್ಡೊ  476 ಅಂಕ ಮತ್ತು ಮೂರನೇ ಸ್ಥಾನದಲ್ಲಿರುವ ಅಂಟೊಯನ್ ಗ್ರೀಸ್ ಮ್ಯಾನ್ 414 ಅಂಕಗಳನ್ನು ಗಳಿಸಿದ್ದಾರೆ. ಫ್ರಾನ್ಸ್ ಆಟಗಾರ ಕಿಲಿಯನ್ ಎಂಬೊಪೆ ನಾಲ್ಕನೇ ಸ್ಥಾನಗಳಿಸಿದ್ದು. ಮೆಸ್ಸಿ ಐದನೇ ಸ್ಥಾನದಲ್ಲಿದ್ದಾರೆ.

21 ವರ್ಷದ ಕೆಳಗಿನ ಆಟಗಾರರಲ್ಲಿ ಎಂಬೊಪೆ ಅವರಿಗೆ ಉತ್ತಮ ಆಟಗಾರ ಪ್ರಶಸ್ತಿ ಲಭಿಸಿದೆ.
ಮೆಸ್ಸಿ ಮತ್ತು ರೊನಾಲ್ಡೊ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗಿಯಾಗಿಲ್ಲ. 2007ರಲ್ಲಿ ಬ್ರೆಜಿಲ್ ಆಟಗಾರ ಕಾಕ ಈ ಪ್ರಶಸ್ತಿ ಪಡೆದ ನಂತರ ಇದೇ ಮೊದಲ ಬಾರಿ ಮೆಸ್ಸಿ, ರೊನಾಲ್ಡೊ ಅವರ ಹೊರತಾಗಿ ಪ್ರಶಸ್ತಿ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಲೂಕಾ ಪಾತ್ರರಾಗಿದ್ದಾರೆ.
 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು