ಬೆಂಗಳೂರು: ಹಾಲಿ ಚಾಂಪಿಯನ್ ಎಫ್‌ಸಿ ಅಗ್ನಿಪುತ್ರ ಮತ್ತು ಕೊಡಗು ಎಫ್‌ಸಿ ತಂಡಗಳು ಇಲ್ಲಿ ನಡೆಯುತ್ತಿರುವ ಸಿ.ಪುಟ್ಟಯ್ಯ ಸ್ಮಾರಕ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ಮುನ್ನಡೆದವು.
ಎ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿರುವ ಕೊಡಗು (4 ಅಂಕ) ಮತ್ತು ಸಿ ಗುಂಪಿನಲ್ಲಿ ಅಗ್ರಸ್ಥಾನ ಹೊಂದಿರುವ ಅಗ್ನಿಪುತ್ರ (6 ಅಂಕ) ತಂಡಗಳು ಅ.4ರಂದು ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಮುಖಾಮುಖಿಯಾಗಲಿವೆ.
ಭಾನುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಎಫ್‌ಸಿ ರಿಯಲ್ ಬೆಂಗಳೂರು ತಂಡವು 2–1ರಿಂದ ರೆಬೆಲ್ಸ್ ಎಫ್‌ಸಿ ತಂಡವನ್ನು ಸೋಲಿಸಿತು. ರಿಯಲ್ ತಂದ ಪರ ಸಾಹಿಲ್ ಸುರೇಶ ಲಮಾಣಿ (44ನೇ ನಿಮಿಷ), ಆರ್. ಕಾರ್ತಿಕೇಯನ್ (47ನೇ) ಗೋಲು ಗಳಿಸಿದರು. ರೆಬೆಲ್ಸ್‌ನ ದಿನೇಶ್ ಎಸ್ (75ನೇ) ಏಕೈಕ ಗೋಲು ದಾಖಲಿಸಿದರು.
ಸಿ ಗುಂಪಿನ ಪಂದ್ಯದಲ್ಲಿ ಅಗ್ನಿಪುತ್ರ ತಂಡವು 1–0ಯಿಂದ ಸೌತ್ ಯುನೈಟೆಡ್ ತಂಡವನ್ನು ಮಣಿಸಿತು. ಲಾಲ್ ರುವಾಟ್ಫೆಲಾ (49ನೇ) ಅವರು ಅಗ್ನಿಪುತ್ರ ಪರ ಗೆಲುವಿನ ಗೋಲು ಹೊಡೆದರು.
ಇಂದಿನ ಪಂದ್ಯಗಳು
ರೂಟ್ಸ್ ಎಫ್‌ಸಿ– ಎಎಸ್‌ಸಿ ಅಂಡ್ ಸೆಂಟರ್ ಎಫ್‌ಸಿ (ಮಧ್ಯಾಹ್ನ 1)