ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಳಮಟ್ಟದಲ್ಲಿ ಫುಟ್‌ಬಾಲ್‌ ಅಭಿವೃದ್ಧಿ: ‌ಎಐಎಫ್‌ಎಫ್‌ಗೆ ಕಂಚಿನ ಪದಕ

Published 1 ನವೆಂಬರ್ 2023, 16:20 IST
Last Updated 1 ನವೆಂಬರ್ 2023, 16:20 IST
ಅಕ್ಷರ ಗಾತ್ರ

ನವದೆಹಲಿ : ದೇಶದಲ್ಲಿ ಫುಟ್‌ಬಾಲ್‌ ಕ್ರೀಡೆಯನ್ನು ತಳಮಟ್ಟದಿಂದ ಅಭಿವೃದ್ಧಿಪಡಿಸಲು ಶ್ರಮಿಸುತ್ತಿರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್) ಕಾರ್ಯಕ್ಕೆ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ನ (ಎಎಫ್‌ಸಿ) ಅಧ್ಯಕ್ಷರ ಮಾನ್ಯತಾ ಕಂಚಿನ ಪದಕ ಲಭಿಸಿದೆ.

ಎಐಎಫ್‌ಎಫ್ ಪಡೆಯುತ್ತಿರುವ ಎರಡನೇ ಮಾನ್ಯತಾ ಪದಕ ಇದಾಗಿದೆ. 2014ರಲ್ಲಿಯೂ ಇದೇ ಮನ್ನಣೆಗೆ ಪಾತ್ರವಾಗಿತ್ತು.

‘ಎಎಫ್‌ಸಿಯ ಈ ಗೌರವವು ಭಾರತದಲ್ಲಿ ಫುಟ್‌ಬಾಲ್‌ ಕ್ರೀಡೆಯ ಅಭಿವೃದ್ಧಿಗೆ ಪ್ರೇರಕವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಭಾವಶಾಲಿಯಾಗಿ ಕೆಲಸ ಮಾಡಲು ಸ್ಫೂರ್ತಿಯಾಗಿದೆ’ ಎಂದು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ಮಂಗಳವಾರ ರಾತ್ರಿ ಪದಕ ಸ್ವೀಕರಿಸಿದ ನಂತರ  ಪ್ರತಿಕ್ರಿಯಿಸಿದರು.

‘ಬ್ಲೂ ಕಬ್ಸ್‌’ಗಳ ಮೂಲಕ ಫುಟ್‌ಬಾಲ್‌ ಕ್ರೀಡೆಯ ಬೆಳವಣಿಗೆಗೆ ಪ್ರಯತ್ನ ಮಾಡಲಾಗಿದೆ. ಅದರ ಪ್ರತಿಫಲ ಮುಂದಿನ ದಿನಗಳಲ್ಲಿ ಗೋಚರಿಸಲಿದೆ. ಈ ಕ್ರೀಡೆಯನ್ನು ಇನ್ನಷ್ಟು ಜನಪ್ರಿಯಗೊಳಿಸಿ ಎಎಫ್‌ಸಿಯ ಡೈಮಂಡ್ ವರ್ಗ ಪ್ರಶಸ್ತಿಯನ್ನು ಗೆಲ್ಲುವುದು ನಮ್ಮ ಗುರಿ’ ಎಂದು ಎಐಎಫ್‌ಎಫ್‌ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT