ಗುರುವಾರ , ನವೆಂಬರ್ 14, 2019
18 °C
ಬಿಡಿಎಫ್‌ಎ ಲೀಗ್‌ ಫುಟ್‌ಬಾಲ್‌ ಟೂರ್ನಿ

ಫುಟ್‌ಬಾಲ್‌: ಎಎಸ್‌ಸಿ ಎಫ್‌ಸಿಗೆ ಜಯ

Published:
Updated:
Prajavani

ಬೆಂಗಳೂರು: ಮಿಂಚಿನ ಆಟವಾಡಿದ ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡ ಬಿಡಿಎಫ್‌ಎ ಸೂಪರ್‌ ಡಿವಿಷನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರು ಇಂಡಿಪೆಂಡೆನ್ಸ್ ತಂಡವನ್ನು 3–0ಯಿಂದ ಮಣಿಸಿತು.

ಶನಿವಾರ ನಡೆದ ಹಣಾಹಣಿಯಲ್ಲಿ ವಿಜೇತ ತಂಡದ ಪರ ಮುತ್ತುರಾಮನ್‌ ತ್ಯಾಗರಾಜನ್‌ (25ನೇ ನಿಮಿಷ), ಚಾನಂಬಮ್‌ ಜೊತಿನ್‌ಸಿಂಗ್‌ (66ನೇ ನಿಮಿಷ) ಗೋಲು ದಾಖಲಿಸಿದರು. ಮತ್ತೊಂದು ಗೋಲ ಅನ್ನು ಬೆಂಗಳೂರು ಇಂಡಿಪೆಂಡೆನ್ಸ್ ತಂಡದ ಅಂಥೋನಿ ಜಯಪ್ರಕಾಶಂ (34ನೇ ನಿಮಿಷ) ಅವರು ಕಾಣಿಕೆ (ಸ್ವಯಂ ಗೋಲು) ನೀಡಿದರು.

ಭಾನುವಾರ ಟೂರ್ನಿಗೆ ವಿರಾಮದ ದಿನ. ಸೋಮವಾರ ನಡೆಯುವ ಸೂಪರ್‌ ಡಿವಿಷನ್‌ ಪಂದ್ಯಗಳಲ್ಲಿ ಬೆಂಗಳೂರು ಈಗಲ್ಸ್ ಎಫ್‌ಸಿ– ಎಫ್‌ಸಿ ಬೆಂಗಳೂರು ಯುನೈಟೆಡ್‌ ಮತ್ತು ಬೆಂಗಳೂರು ಡ್ರೀಮ್‌ ಯುನೈಟೆಡ್‌ ಎಫ್‌ಸಿ–ಸೌತ್‌ ಯುನೈಟೆಡ್‌ ಎಫ್‌ಸಿ ಮುಖಾಮುಖಿಯಾಗಲಿವೆ.‘ಎ’ ಡಿವಿಷನ್‌ ಲೀಗ್‌ನಲ್ಲಿ ಎಫ್‌ಸಿ ಡೆಕ್ಕನ್‌– ಬೆಂಗಳೂರು ಗನ್ನರ್ಸ್ ಮತ್ತು ಪೋಸ್ಟಲ್‌ ಡಿಪಾರ್ಟ್‌ಮೆಂಟ್‌ ಎಫ್‌ಸಿ– ಪರಿಕ್ರಮ ಎಫ್‌ಸಿ ನಡುವೆ ಹಣಾಹಣಿ ನಡೆಯಲಿದೆ.

ಪ್ರತಿಕ್ರಿಯಿಸಿ (+)