ಫುಟ್‌ಬಾಲ್‌: ಫೈನಲ್‌ಗೆ ಎಂಇಜಿ

7

ಫುಟ್‌ಬಾಲ್‌: ಫೈನಲ್‌ಗೆ ಎಂಇಜಿ

Published:
Updated:

ಬೆಂಗಳೂರು: ಪೆನಾಲ್ಟಿ ಅವಕಾಶದಲ್ಲಿ ಅಮೋಘ ಸಾಮರ್ಥ್ಯ ತೋರಿದ ಎಂಇಜಿ ಆ್ಯಂಡ್‌ ಸೆಂಟರ್‌ ಎಫ್‌ಸಿ ತಂಡ ಬೆಂಗಳೂರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ (ಬಿಡಿಎಫ್‌ಎ) ಆಶ್ರಯದ ಸಿ.‍ಪುಟ್ಟಯ್ಯ ಸ್ಮಾರಕ ಕಪ್‌ ಸೂಪರ್‌ ಡಿವಿಷನ್‌ ಲೀಗ್‌ನಲ್ಲಿ ಫೈನಲ್‌ ಪ್ರವೇಶಿಸಿದೆ.

ಅಶೋಕನಗರದಲ್ಲಿರುವ ಬೆಂಗಳೂರು ಫುಟ್‌ಬಾಲ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಎಂಇಜಿ ತಂಡ 5–3 ಗೋಲುಗಳಿಂದ ಎಎಸ್‌ಸಿ ಆ್ಯಂಡ್‌ ಸೆಂಟರ್‌ ಎಫ್‌ಸಿ ವಿರುದ್ಧ ಗೆದ್ದಿತು.

ಉಭಯ ತಂಡಗಳು ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರಿಂದ ನಿಗದಿತ ಅವಧಿಯ (90 ನಿಮಿಷ) ಆಟ ಗೋಲು ರಹಿತವಾಗಿತ್ತು. ಹೀಗಾಗಿ ವಿಜೇತರನ್ನು ನಿರ್ಧರಿಸಲು ಪೆನಾಲ್ಟಿ ಮೊರೆ ಹೋಗಲಾಯಿತು. ಈ ಅವಕಾಶದಲ್ಲಿ ಎಂಇಜಿ ತಂಡದ ರಾಮು, ಲಿಯೊನ್‌, ಮುಜೀಬ್‌, ವಿಹಿನ್‌ ಮತ್ತು ಇನಾಕ್ಕುಮ್‌ ಚೆಂಡನ್ನು ಗುರಿ ತಲುಪಿಸಿದರು.

ಪ್ರಶಸ್ತಿ ಸುತ್ತಿಗೆ ಇನ್‌ಕಮ್‌ ಟ್ಯಾಕ್ಸ್‌: ಪ್ರಸನ್ನಕುಮಾರ್‌ ಸ್ಮಾರಕ ಶೀಲ್ಡ್‌ಗಾಗಿ ನಡೆಯುತ್ತಿರುವ ‘ಎ’ ಡಿವಿಷನ್‌ ಲೀಗ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ ತಂಡ ಫೈನಲ್‌ಗೆ ಲಗ್ಗೆ ಇಟ್ಟಿತು.

ಸೆಮಿಫೈನಲ್‌ನಲ್ಲಿ ಇನ್‌ಕಮ್‌ ಟ್ಯಾಕ್ಸ್‌ 3–1 ಗೋಲುಗಳಿಂದ ಎಫ್‌ಸಿ ಡೆಕ್ಕನ್‌ ವಿರುದ್ಧ ವಿಜಯಿಯಾಯಿತು.

ವಿಜಯಿ ತಂಡದ ಅಹಮದ್‌ 65 ಮತ್ತು 80+5ನೇ ನಿಮಿಷಗಳಲ್ಲಿ ಚೆಂಡನ್ನು ಗುರಿ ತಲುಪಿಸಿದರು. ಜಗನ್‌ 43ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಡೆಕ್ಕನ್‌ ತಂಡದ ಸೂರ್ಯ 10ನೇ ನಿಮಿಷದಲ್ಲಿ ಗೋಲು ಬಾರಿಸಿ ಸೋಲಿನ ನಡುವೆಯೂ ಗಮನ ಸೆಳೆದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !