ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿ: ಬೆಂಗಳೂರು ಎಫ್‌ಸಿಗೆ ಬಶುಂಧರಾ ಕಿಂಗ್ಸ್ ಸವಾಲು

ಚೆಟ್ರಿ ಪಡೆಗೆ ಜಯದ ವಿಶ್ವಾಸ
Last Updated 20 ಆಗಸ್ಟ್ 2021, 12:29 IST
ಅಕ್ಷರ ಗಾತ್ರ

ಮಾಲೆ, ಮಾಲ್ಡಿವ್ಸ್ : ಗೆಲುವಿನ ಹಳಿಗೆ ಮರಳುವ ತವಕದಲ್ಲಿರುವ ಬೆಂಗಳೂರು ಎಫ್‌ಸಿ (ಬಿಎಫ್‌ಸಿ) ತಂಡವು ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶನಿವಾರ ಬಾಂಗ್ಲಾದೇಶದ ಬಶುಂಧರಾ ಕಿಂಗ್ಸ್ ಸವಾಲಿಗೆ ಸಜ್ಜಾಗಿದೆ.

‘ಡಿ’ ಗುಂಪಿನ ಈ ಹಿಂದಿನ ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್‌ ವಿರುದ್ಧ 0-2 ಅಂತರದಿಂದ ಸುನಿಲ್ ಚೆಟ್ರಿ ನಾಯಕತ್ವದ ಬಿಎಫ್‌ಸಿ ಸೋಲು ಕಂಡಿತ್ತು. ಆದರೆ ಈ ಸೋಲು ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ಚಾಂಪಿಯನ್‌ ತಂಡವನ್ನು ಎದುರಿಸಲು ತಮ್ಮ ಮೇಲೆ ಯಾವುದೇ ಒತ್ತಡ ತಂದಿಲ್ಲ ಎಂದುಮುಖ್ಯ ಕೋಚ್ ಮಾರ್ಕೊ ಪೆಜೌಲಿ ಶುಕ್ರವಾರ ಹೇಳಿದ್ದಾರೆ.

ಗುಂಪು ಹಂತದ ಮೊದಲ ಹಣಾಹಣಿಯಲ್ಲಿ ಮಜಿಯಾ ಸ್ಪೋರ್ಟ್ಸ್ ಆ್ಯಂಡ್‌ ರಿಕ್ರಿಯೇಷನ್ಸ್ ಕ್ಲಬ್ ತಂಡದ ಎದುರು 2–0ಯಿಂದ ಜಯ ಸಾಧಿಸಿರುವ ಬಶುಂಧರಾ ಕಿಂಗ್ಸ್ ಕೂಡ ಆತ್ಮವಿಶ್ವಾಸದಲ್ಲಿದೆ.

ಕಳೆದ ಆವೃತ್ತಿಯ ಎಎಫ್‌ಸಿ ಟೂರ್ನಿಯಲ್ಲಿ ಬಶುಂಧರಾ ಕಿಂಗ್ಸ್ ಪದಾರ್ಪಣೆ ಮಾಡಿತ್ತು. 2020–21ರ ಸಾಲಿನ ಬಾಂಗ್ಲಾದೇಶ ಫೆಡರೇಷನ್ ಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಬಶುಂಧರಾ ಕಿಂಗ್ಸ್ ಇದೇ ಮೊದಲ ಬಾರಿ ಬೆಂಗಳೂರು ಎಫ್‌ಸಿ ತಂಡಕ್ಕೆ ಮುಖಾಮುಖಿಯಾಗಲಿದೆ. ಆದರೆ ಎದುರಾಳಿಗಳ ಸವಾಲಿಗೆ ಸನ್ನದ್ಧವಾಗಿದ್ದೇವೆ ಎಂದು ಆ ತಂಡದ ಮುಖ್ಯ ಕೋಚ್‌ ಆಸ್ಕರ್‌ ಬ್ರೂಜಾನ್‌ ಹೇಳಿದ್ದಾರೆ.

ಪಂದ್ಯ ಆರಂಭ: ಸಂಜೆ 4.30

***

ಜಯದ ಲಯ ಮುಂದುವರಿಸುವ ತವಕದಲ್ಲಿ ಎಟಿಕೆಎಂಬಿ
ಮೊದಲ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿಗೆ ಸೋಲುಣಿಸಿರುವ ಎಟಿಕೆ ಮೋಹನ್ ಬಾಗನ್ (ಎಟಿಕೆಎಂಬಿ) ತಂಡವು ಅದೇ ಲಯವನ್ನು ಮುಂದುವರಿಸುವ ಹಂಬಲದಲ್ಲಿದೆ. ಶನಿವಾರ ನಡೆಯುವ ಹಣಾಹಣಿಯಲ್ಲಿ ರಾಯ್‌ ಕೃಷ್ಣ ನಾಯಕತ್ವದ ತಂಡವು ಮಜಿಯಾ ಸ್ಪೋರ್ಟ್ಸ್ ಆ್ಯಂಡ್‌ ರಿಕ್ರಿಯೇಷನ್ಸ್ ಕ್ಲಬ್ ಎದುರು ಸೆಣಸಲಿದೆ.

ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಎಟಿಕೆಎಂಬಿ ತಂಡಕ್ಕೆ ನಾಕೌಟ್ ಹಾದಿ ಸುಲಭವಾಗಲಿದೆ.

ಪಂದ್ಯ ಆರಂಭ: ರಾತ್ರಿ 9.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT