ಬಿಎಫ್‌ಸಿಯಲ್ಲಿ ಮುಂದುವರಿದ ಸುನಿಲ್ ಚೆಟ್ರಿ

7

ಬಿಎಫ್‌ಸಿಯಲ್ಲಿ ಮುಂದುವರಿದ ಸುನಿಲ್ ಚೆಟ್ರಿ

Published:
Updated:
ಸುನಿಲ್ ಚೆಟ್ರಿ

ಬೆಂಗಳೂರು: ಉದ್ಯಾನನಗರಿಯ ಫುಟ್‌ಬಾಲ್ ಪ್ರೇಮಿಗಳ ಅಚ್ಚುಮೆಚ್ಚಿನ ಆಟಗಾರ ಸುನಿಲ್ ಚೆಟ್ರಿ ಅವರು ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ)ನೊಂದಿಗಿನ ತಮ್ಮ ಒಪ್ಪಂದವನ್ನು ಮುಂದುವರಿಸಿದ್ದಾರೆ.

ತಂಡದ ನಾಯಕನಾಗಿರುವ ಅವರು ಮುಂದಿನ ಮೂರು ವರ್ಷಗಳವರೆಗೆ ಇಲ್ಲಿ ಆಡಲಿದ್ದಾರೆ. 2013ರಲ್ಲಿ ಬಿಎಫ್‌ಸಿ ಆರಂಭವಾದಾಗಿನಿಂದಲೂ ಅವರು ತಂಡದಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಹಲವು ದಾಖಲೆಗಳನ್ನು ಬರೆದಿದೆ. ದೇಶದ ಉತ್ತಮ ಲೀಗ್ ತಂಡಗಳಲ್ಲಿ ಒಂದಾಗಿದೆ.

ಲೀಗ್‌ ತಂಡವೊಂದರಲ್ಲಿ ಇಷ್ಟು ಸುದೀರ್ಘ ಕಾಲದವರೆಗೆ ಆಡುತ್ತಿರುವ ಏಕೈಕ ಆಟಗಾರ ಎಂಬ ಹೆಗ್ಗಳಿಕೆಯೂ ಅವರದ್ದಾಗಿದೆ.

‘ಬೆಂಗಳೂರು ಮತ್ತು ಇಲ್ಲಿಯ ಫುಟ್‌ಬಾಲ್ ಪ್ರೇಮಿಗಳು ನನ್ನ ಜೀವನದ ಭಾಗವಾಗಿದ್ದಾರೆ. ಹೀಗಾಗಿ ಈ ಕ್ಲಬ್ ಬಿಟ್ಟು ಹೋಗಲು ನನ್ನಿಂದ ಸಾಧ್ಯವಿಲ್ಲ. ಬಿಎಫ್‌ಸಿ ನನಗೆ ಎಲ್ಲವನ್ನೂ ನೀಡಿದೆ. ಇಲ್ಲಿ ಮುಂದುವರಿಯುವುದು ಅತ್ಯಂತ ಖುಷಿಯ ಸಂಗತಿ’ ಎಂದು ಸುನಿಲ್ ಚೆಟ್ರಿ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !