ಭಾನುವಾರ, ಜನವರಿ 19, 2020
23 °C
ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಾಳೆಯಿಂದ ಪಂದ್ಯಗಳು

ಸಿಎಂ ಕಪ್ ಫುಟ್‌ಬಾಲ್ ನಾಳೆಯಿಂದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಕಪ್‌ಗಾಗಿ ಇಲ್ಲಿ ನಡೆಯಲಿರುವ ಅಖಿಲ ಭಾರತ ಫುಟ್‌ಬಾಲ್ ಟೂರ್ನಿಯಲ್ಲಿ ರಾಜ್ಯದ ನಾಲ್ಕು ತಂಡಗಳು ಪಾಲ್ಗೊಳ್ಳಲಿವೆ. ಮಂಗಳೂರು ಎಫ್‌ಸಿ ಮತ್ತು ಬೆಂಗಳೂರು ಇಂಡಿಪೆಂಡೆನ್ಸ್ ತಂಡಗಳು ‘ಎ’ ಗುಂಪಿನಲ್ಲಿ ಸ್ಥಾನ ಗಳಿಸಿವೆ. ಕಿಕ್‌ಸ್ಟಾರ್ಟ್ ಎಫ್‌ಸಿ ಕರ್ನಾಟಕ ಮತ್ತು ಬೆಂಗಳೂರು ಡ್ರೀಮ್ಸ್ ಯುನೈಟೆಡ್ ಎಫ್‌ಸಿ ತಂಡಗಳು ‘ಬಿ’ ಗುಂಪಿನಲ್ಲಿವೆ.

ಮಂಡ್ಯದ ಸರ್.ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಜನವರಿ 3ರಿಂದ 12ರ ವರೆಗೆ ಟೂರ್ನಿ ನಡೆಯಲಿದ್ದು ತಿರುವನಂತಪುರದ ಕೆಎಸ್‌ಇಬಿ, ಅನಂತಪುರದ ಎಎಸ್‌ಎ, ಸಿಕಂದರಾಬಾದ್‌ನ ಡೆಕ್ಕನ್ ಡೈನಾಮೋಸ್‌ ಮತ್ತು ಎಚ್‌ಎಎಲ್ ತಂಡಗಳು ಕೂಡ ಪಾಲ್ಗೊಳ್ಳಲಿವೆ. ಕೆಎಸ್‌ಇಬಿ ಮತ್ತು ಎಎಸ್‌ಎ ‘ಬಿ’ ಗುಂಪಿನಲ್ಲಿದ್ದರೆ ಉಳಿದೆರಡು ತಂಡಗಳು ’ಎ’ ಗುಂಪಿನಲ್ಲಿ ಸೆಣಸಲಿವೆ.

ಮೊದಲ ದಿನವಾದ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಎಚ್‌ಎಎಲ್‌ ಮತ್ತು ಡೆಕ್ಕನ್ ಡೈನಾಮೋಸ್ ನಡುವೆ, ಸಂಜೆ 4 ಗಂಟೆಗೆ ಮಂಗಳೂರು ಎಫ್‌ಸಿ ಮತ್ತು ಬೆಂಗಳೂರು ಇಂಡಿಪೆಂಡೆನ್ಸ್ ಎಫ್‌ಸಿ ನಡುವೆ ಪಂದ್ಯ ನಡೆಯಲಿದೆ. 

ಜನವರಿ 8ರ ವರೆಗೆ ಪ್ರತಿದಿನ ಮಧ್ಯಾಹ್ನ 1.30 ಮತ್ತು ಸಂಜೆ 4ಕ್ಕೆ ಗುಂಪು ಹಂತದ ಪಂದ್ಯಗಳು ನಡೆಯಲಿದ್ದು 10ರಂದು ಸೆಮಿಫೈನಲ್ ಮತ್ತು 12ರಂದು ಫೈನಲ್ ಪಂದ್ಯ ನಡೆಯಲಿದೆ ಎಂದು ರಾಜ್ಯ ಫುಟ್‌ಬಾಲ್ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಎಂ.ಸತ್ಯನಾರಾಯಣ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು