ಬೆಂಗಳೂರು: ಲಾಲ್ತಾ ಕಿಮಾ ರಾಲ್ತೆ ಅವರ ಅಮೋಘ ಆಟದ ಬಲದಿಂದ ಕೊಡಗು ಎಫ್‌ಸಿ ತಂಡವು ಇಲ್ಲಿ ಸೋಮವಾರ ಆರಂಭವಾದ ಸಿ.ಪುಟ್ಟಯ್ಯ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ‘ಎ’ ಗುಂಪಿನ ಪಂದ್ಯದಲ್ಲಿ ಕೊಡಗು ತಂಡವು 4–3 ಗೋಲುಗಳಿಂದ ಎಫ್‌ಸಿ ರಿಯಲ್ ಬೆಂಗಳೂರು ತಂಡವನ್ನು ಮಣಿಸಿತು.
ಕೊಡಗು ಪರ ಲಾಲ್ತಾ ಕಿಮಾ (37ನೇ ಮತ್ತು 89ನೇ) ಎರಡು ಗೋಲು ಗಳಿಸಿದರೆ, ಆದಿತ್ಯ ಕುಮಾರ್ (26ನೇ ನಿಮಿಷ), ಲಾಲ್ ಕ್ರಾಸ್ಮಾವಿಯಾ (28ನೇ) ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು. ರಿಯಲ್ ತಂಡಕ್ಕಾಗಿ ಸೈಯದ್ ಅಹಮದ್ (43ನೇ ಮತ್ತು 56ನೇ) ಮತ್ತು ಸೈವಿನ್ ಎರಿಕ್ಸನ್ ಇ. (83ನೇ) ಗೋಲು ತಂದಿತ್ತರು.
‘ಸಿ’ ಗುಂಪಿನ ಪಂದ್ಯದಲ್ಲಿ ಸೌತ್ ಯುನೈಟೆಡ್ ಎಫ್‌ಸಿ ತಂಡವು 2–1 ಗೋಲುಗಳಿಂದ ಪರಿಕ್ರಮ ಎಫ್‌ಸಿ ತಂಡವನ್ನು ಸೋಲಿಸಿತು. ಸೌತ್ ತಂಡದ ಪರ ನಿಖಿಲ್ ರಾಜ್ ಮುರಗೇಶ್ ಕುಮಾರ್ (17ನೇ), ಬಿಬಿನ್ ಬಾಬು (25ನೇ) ಗೋಲು ದಾಖಲಿಸಿದರು. ರವೀಂದರ್ ಕುಮಾರ್ (45+1ನೇ) ಅವರು ಪರಿಕ್ರಮ ತಂಡದ ಪರ ಏಕೈಕ ಗೋಲು ಗಳಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಆರ್. ಸಂಪತ್ ರಾಜ್ ಟೂರ್ನಿಗೆ ಚಾಲನೆ ನೀಡಿದರು.
ನಾಳಿನ ಪಂದ್ಯಗಳು
ಕಿಕ್‌ಸ್ಟಾರ್ಟ್ ಎಫ್‌ಸಿ– ಎಎಸ್‌ಸಿ ಅಂಡ್ ಸೆಂಟರ್ ಎಫ್‌ಸಿ (ಮಧ್ಯಾಹ್ನ 1)