ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಫ್‌ಸಿ ಕಪ್‌ ಚೆನ್ನೈಯಿನ್‌ಗೆ ಜಯ

ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿ: ಚೆನ್ನೈಯಿನ್ ಎಫ್‌ಸಿ ತಂಡಕ್ಕೆ ನಿರಾಸೆ
Last Updated 26 ಜೂನ್ 2019, 19:37 IST
ಅಕ್ಷರ ಗಾತ್ರ

ಕಠ್ಮಂಡು (ಪಿಟಿಐ): ಅಂತಿಮ ಪಂದ್ಯ ದಲ್ಲಿ ರೋಚಕ ಜಯ ಸಾಧಿಸಿದರೂ ಎಎಫ್‌ಸಿ ಕಪ್ ಫುಟ್‌ಬಾಲ್ ಟೂರ್ನಿ ಯಲ್ಲಿ ಚೆನ್ನೈಯಿನ್ ಎಫ್‌ಸಿ ತಂಡದ ನಾಕೌಟ್‌ ಹಂತದ ಕನಸು ನನಸಾಗಲಿಲ್ಲ.

ಇಲ್ಲಿನ ಎಎನ್‌ಎಫ್‌ಎ ಕ್ರೀಡಾ ಸಂಕೀರ್ಣದಲ್ಲಿ ಬುಧವಾರ ನಡೆದ ಗುಂಪು ಹಂತದ ತನ್ನ ಕೊನೆಯ ಪಂದ್ಯದಲ್ಲಿ ಚೆನ್ನೈಯಿನ್ 3–2ರಲ್ಲಿ ಸ್ಥಳೀಯ ಮನಾಂಗ್ ಮರ್ಷ್ಯಾಂಗ್ಡಿ ತಂಡವನ್ನು ಮಣಿಸಿತು.

ಇದೇ ಸಂದರ್ಭದಲ್ಲಿ ಗುವಾಹ ಟಿಯಲ್ಲಿ ನಡೆದ ಪಂದ್ಯದಲ್ಲಿ ಮಿನರ್ವಾ ಪಂಜಾಬ್ ಎದುರು ಬಾಂಗ್ಲಾದೇಶದ ಅಬಹಾನಿ ಲಿಮಿಟೆಡ್ ಢಾಕಾ ತಂಡ 1–0ಯಿಂದ ಗೆದ್ದಿತು. ಈ ಮೂಲಕ ‘ಇ’ ಗುಂಪಿನ ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನಕ್ಕೇರಿತು. ಹೀಗಾಗಿ ಅಂತರ ವಲಯ ಸೆಮಿಫೈನಲ್‌ಗೇರುವ ಚೆನ್ನೈಯಿನ್ ಕನಸು ಭಗ್ನಗೊಂಡಿತು. 53ನೇ ನಿಮಿಷದಲ್ಲಿ ಪಂದ್ಯದ ಮೊದಲ ಗೋಲು ದಾಖಲಾಯಿತು. ಪ್ರವಾಸಿ ತಂಡಕ್ಕೆ ಅನಿರುದ್ಧ ಥಾಪಾ ಗೋಲು ತಂದಿತ್ತರು. 66ನೇ ನಿಮಿಷದಲ್ಲಿ ಎಲಿ ಸಾಬಿಯತಾ ಫಿಲೊ ತಂಡದ ಮುನ್ನಡೆಯನ್ನು 2–0ಗೆ ಏರಿಸಿದರು.

71ನೇ ನಿಮಿಷದಲ್ಲಿ ಮನಾಂಗ್ ತಿರುಗೇಟು ನೀಡಿತು. ಒಲಾದಿಪೊ ಗೋಲು ಗಳಿಸಿದರು. 79ನೇ ನಿಮಿ ಷದಲ್ಲಿ ಬದಲಿ ಆಟಗಾರ ವಿಶ್ವಕರ್ಮ ಸೂರಜ್‌ ಸಮಬಲದ ಗೋಲು ಗಳಿಸಿದರು.88ನೇ ನಿಮಿಷದಲ್ಲಿ ಮೊಹಮ್ಮದ್ ರಫಿ ಗಳಿಸಿದ ಗೋಲಿನ ಮೂಲಕ ಚೆನ್ನೈಯಿನ್ ಜಯಿಸಿತು. ಹೆಚ್ಚುವರಿ ಅವಧಿಯಲ್ಲಿ ಗಳಿಸಿದ ಗೋಲಿನ ಮೂಲಕ ಅಬಹಾನಿ ತಂಡ ಜಯ ಗಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT