ಚೆನ್ನೈಯಿನ್‌ನಲ್ಲೇ ಮುಂದುವರಿಯಲಿರುವ ಧನಪಾಲ್‌

7

ಚೆನ್ನೈಯಿನ್‌ನಲ್ಲೇ ಮುಂದುವರಿಯಲಿರುವ ಧನಪಾಲ್‌

Published:
Updated:
Prajavani

ಚೆನ್ನೈ: ಮಿಡ್‌ಫೀಲ್ಡರ್‌ ಧನ್‌ಪಾಲ್‌ ಗಣೇಶ್‌ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಇನ್ನೂ ಮೂರು ವರ್ಷ ಚೆನ್ನೈಯನ್‌ ಎಫ್‌ಸಿ ತಂಡದಲ್ಲಿರಲು ನಿರ್ಧರಿಸಿದ್ದಾರೆ. ಈ ಕುರಿತ ಒಪ್ಪಂದಕ್ಕೆ ಮಂಗಳವಾರ ಸಹಿ ಹಾಕಿದ್ದಾರೆ.

‘ಕ್ಲಬ್‌ ಜೊತೆ ಒಪ್ಪಂದ ವಿಸ್ತರಣೆಗೊಳಿಸಲು ಸಾಧ್ಯವಾದದ್ದಕ್ಕೆ ಸಂತಸವಿದೆ. ಕಾಲಿನ ಗಾಯದ ಸಮಸ್ಯೆ ಎದುರಿಸುತ್ತಿದ್ದರೂ ಚೆನ್ನೈಯಿನ್‌ ನನ್ನ ಮೇಲೆ ನಂಬಿಕೆ ಇರಿಸಿಕೊಂಡಿದೆ. ಉತ್ತಮ ಸಾಮರ್ಥ್ಯ ತೋರಿ ಈ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಧನಪಾಲ್‌ ತಿಳಿಸಿದರು.

2017–18ರ ಐಎಸ್‌ಎಲ್‌ನಲ್ಲಿ ತಂಡಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ಧನಪಾಲ್ ಪ್ರಮುಖ ಪಾತ್ರ ವಹಿಸಿದ್ದರು. ಪ್ರಮುಖ ಹಂತದಲ್ಲಿ ಗೋಲುಗಳನ್ನು ಗಳಿಸಿ ಅವರು ತಂಡದ ಕೈ ಹಿಡಿದಿದ್ದರು. ಅವರು ಏಳು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !