ಬುಧವಾರ, ನವೆಂಬರ್ 25, 2020
19 °C

ಫುಟ್‌ಬಾಲ್ ಆಟಗಾರ ಸಲಾಗೆ ಕೋವಿಡ್–19

ಎಪಿ Updated:

ಅಕ್ಷರ ಗಾತ್ರ : | |

Prajavani

ಕೈರೊ: ಈಜಿಪ್ಟ್‌ ರಾಷ್ಟ್ರೀಯ ತಂಡ ಮತ್ತು ಲಿವರ್‌ಪೂಲ್ ಫುಟ್‌ಬಾಲ್ ಕ್ಲಬ್‌ನ್ ಸ್ಟ್ರೈಕರ್ ಮೊಹಮ್ಮದ್ ಸಲಾ ಅವರಿಗೆ ಕೋವಿಡ್‌–19 ಇರುವುದು ದೃಢಪಟ್ಟಿದೆ ಎಂದು ಈಜಿಪ್ಟ್ ತಂಡದ ವೈದ್ಯ ಮೊಹಮ್ಮದ್ ಅಬು ಎಲೆಲಾ ಭಾನುವಾರ ತಿಳಿಸಿದ್ದಾರೆ.

ಅವರು ಮುಂದಿನ ವಾರ ಪೂರ್ತಿ ಪ್ರತ್ಯೇಕವಾಸದಲ್ಲಿ ಇರುವರು ಎಂದು ಅವರು ವಿವರಿಸಿದ್ದಾರೆ. ಆಫ್ರಿಕಾ ಕಪ್ ನೇಷನ್ಸ್‌ ಅರ್ಹತಾ ಟೂರ್ನಿಯಲ್ಲಿ ಟೋಗೊ ವಿರುದ್ಧದ ಪಂದ್ಯದ ಮುನ್ನಾ ದಿನ ಸಲಾ ಅವರ ಪರೀಕ್ಷಾ ವರದಿ ಬಂದಿತ್ತು.

ಮುಂದಿನ ಭಾನುವಾರ ನಡೆಯಲಿರುವ ಪ್ರೀಮಿಯರ್ ಲೀಗ್ ಟೂರ್ನಿಯ ಲೀಸೆಸ್ಟರ್ ಎದುರಿನ ಪಂದ್ಯದಲ್ಲಿ ಆಡಲು ಅವರಿಗೆ ಸಾಧ್ಯವಾಗುವುದಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು