ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ಯಾಂಟಮ್‌ ಎಫ್‌ಸಿಗೆ ಭರ್ಜರಿ ಜಯ

Last Updated 5 ಜೂನ್ 2019, 18:59 IST
ಅಕ್ಷರ ಗಾತ್ರ

ಬೆಂಗಳೂರು: ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಸಿ ಡಿವಿಜನ್ ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಬುಧವಾರ ಫ್ಯಾಂಟಮ್‌ ಎಫ್‌ಸಿ ತಂಡವು ಮಿನರ್ವ ಎಫ್‌ಸಿ ತಂಡವನ್ನು 6–0 ಗೋಲುಗಳಿಂದ ಸೋಲಿಸಿತು.

ವಿಜೇತ ತಂಡದ ಪರ ಕೊನಾಲಿಸ್‌ ಮೊರಿಂಗ್‌ ಅವರು ಅವಳಿ ಗೋಲು (20, 41ನೇ ನಿಮಿಷ) ಬಾರಿಸಿ ಮಿಂಚಿದರು. ನಿಶಾಂತ್ ಭಟ್‌ (7ನೇ ನಿಮಿಷ), ಲುಮಿನ್ಲೆನ್‌ ತೌಥಂಗ್‌ (20ನೇ ನಿಮಿಷ), ಖೆಲಿಂಗ್‌ ಆ್ಯಂಗ್‌ಸ್ಸುಯಿರಾಂಗ್‌ (45ನೇ ನಿಮಿಷ) ಹಾಗೂ ದಿನೇಶ್‌ ಶರ್ಮಾ (60ನೇ ನಿಮಿಷ) ತಲಾ ಒಂದು ಗೋಲು ಹೊಡೆದರು.

ಮತ್ತೊಂದು ಪಂದ್ಯದಲ್ಲಿ ಸುನೇಸಾ ಎಫ್‌ಸಿ ತಂಡವು ವಿಜಯನಗರ ಎಫ್‌ಸಿ ತಂಡವನ್ನು 1–0 ಗೋಲಿನಿಂದ ಮಣಿಸಿತು. ಸುನೇಸಾ ಪರ ಕೊಂಗ್ರೆಯಿವೊ 16ನೇ ನಿಮಿಷದಲ್ಲಿ ಗೋಲು ದಾಖಲಿಸಿದರು.

ಇನ್ನೊಂದು ಪಂದ್ಯದಲ್ಲಿ ಯುನಿವರ್ಸಲ್‌ ಎಫ್‌ಸಿ ತಂಡವು ಇಸ್ರೊ ಎಫ್‌ಸಿ ತಂಡವನ್ನು 3–0ಯಿಂದ ಮಣಿಸಿತು. ವಿಜೇತ ತಂಡದ ಪರ ಬ್ರಿಜೇಶ್‌ (7ನೇ ನಿಮಿಷ), ಗುರುಪ್ರಸಾದ್‌ (16ನೇ ನಿಮಿಷ) ಹಾಗೂ ಸುನಿಲ್‌ಕುಮಾರ್‌ (27ನೇ ನಿಮಿಷ) ತಲಾ ಒಂದು ಗೋಲು ಹೊಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT