ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಟಿಚುಂಬನ: ರುಬಿಯೇಲ್ಸ್‌ಗೆ 3 ವರ್ಷ ನಿಷೇಧ

Published 30 ಅಕ್ಟೋಬರ್ 2023, 14:25 IST
Last Updated 30 ಅಕ್ಟೋಬರ್ 2023, 14:25 IST
ಅಕ್ಷರ ಗಾತ್ರ

ಜಿನೇವಾ: ಸ್ಪೇನ್‌ ಫುಟ್‌ಬಾಲ್‌ ತಂಡದ ಆಟಗಾರ್ತಿ ಜೆನ್ನಿ ಹೆರ್ಮೊಸೊ ಅವರ ತುಟಿಗೆ ಚುಂಬಿಸಿದ ಪ್ರಕರಣದಲ್ಲಿ ಸ್ಪೇನ್‌ ಫುಟ್‌ಬಾಲ್‌ ಫೆಡರೇಷನ್‌ ಮಾಜಿ ಅಧ್ಯಕ್ಷ ಲೂಯಿಸ್ ರುಬಿಯೇಲ್ಸ್ ಅವರ ಮೇಲೆ ಫಿಫಾ ಮೂರು ವರ್ಷಗಳ ನಿಷೇಧ ಹೇರಿದೆ.

ಆಗಸ್ಟ್‌ನಲ್ಲಿ ಸಿಡ್ನಿಯಲ್ಲಿ ನಡೆದಿದ್ದ ಫಿಫಾ ಮಹಿಳಾ ವಿಶ್ವಕಪ್‌ ಟೂರ್ನಿಯಲ್ಲಿ ಸ್ಪೇನ್‌ ಚಾಂಪಿಯನ್‌ ಆಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೆರ್ಮೊಸೊ ತುಟಿಗೆ ಚುಂಬಿಸಿದ್ದ ರುಬಿಯೇಲ್ಸ್ ವ್ಯಾಪಕ ಟೀಕೆಗೆ ಒಳಗಾಗಿದ್ದರು.

ಈ ಘಟನೆಯ ಬೆನ್ನಲ್ಲೇ ಫಿಫಾ ಅವರನ್ನು 90 ದಿನಗಳ ಮಟ್ಟಿಗೆ ಅಮಾನತು ಮಾಡಿತ್ತು. ಇದೀಗ ಅವರ ಮೇಲೆ ಕಠಿಣ ಕ್ರಮ ಕೈಗೊಂಡಿದೆ. ‘ಫಿಫಾ ಶಿಸ್ತು ಸಮಿತಿಯು ರುಬಿಯೇಲ್ಸ್‌ ಮೇಲೆ ನಿಷೇಧ ಹೇರಿದೆ. ಮುಂದಿನ ಮೂರು ವರ್ಷಗಳ ಕಾಲ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ ಚಟುವಟಿಕೆಗಳಲ್ಲಿ ತೊಡಗುವಂತಿಲ್ಲ’ ಎಂದು ಫಿಫಾ ಸೋಮವಾರ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

‘ತಾವು ಉದ್ದೇಶಪೂರ್ವಕವಾಗಿ ಚುಂಬಿಸಿಲ್ಲ. ತಂಡದ ಗೆಲುವಿನ ಸಂಭ್ರಮದಲ್ಲಿ ಈ ರೀತಿ ಆಗಿದೆ' ಎಂದು ರುಬಿಯೇಲ್ಸ್‌ ತಮ್ಮ ವರ್ತನೆಯನ್ನು ಸಮರ್ಥಿಸಿಕೊಂಡಿದ್ದರು. ಆರಂಭದಲ್ಲಿ ಹುದ್ದೆ ತ್ಯಜಿಸಲು ನಿರಾಕರಿಸಿದ್ದ ಅವರು ಒತ್ತಡಕ್ಕೆ ಮಣಿದು ಸೆಪ್ಟೆಂಬರ್‌ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT