ಗುರುವಾರ , ಡಿಸೆಂಬರ್ 12, 2019
26 °C

ಮೋದಿಗೆ ಫಿಫಾ ಜೆರ್ಸಿ ಕೊಡುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಬ್ಯೂನಸ್ ಐರಿಸ್‌: ಅಂತರರಾಷ್ಟ್ರೀಯ ಫುಟ್‌ಬಾಲ್‌ ಫೆಡರೇಷನ್‌ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಜೆರ್ಸಿ ಕೊಡುಗೆ ನೀಡಿದರು.

ಜಿ–20 ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ ಅವರು ಇನ್ಫಾಂಟಿನೊ ಅವರನ್ನು ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ವಿಶಿಷ್ಟವಾಗಿ ಸಿದ್ಧಪಡಿಸಿದ್ದ ಜೆರ್ಸಿ ನೀಡಿದರು. ಇದರಲ್ಲಿ ಮೋದಿ ಹೆಸರನ್ನು ಬರೆಯಲಾಗಿದೆ. ಇದನ್ನು ಮೋದಿ ಟ್ವಿಟರ್‌ನಲ್ಲಿ ಹಾಕಿದ್ದಾರೆ.

‘ಇಲ್ಲಿಗೆ ಬರುವಾಗ ಫುಟ್‌ಬಾಲ್‌ ಬಗ್ಗೆ ಯೋಚಿಸಿರಲಿಲ್ಲ. ಬಂದ ನಂತರ, ಅರ್ಜೆಂಟೀನಾದ ಫುಟ್‌ಬಾಲ್ ಬಗ್ಗೆ ಭಾರತದ ಜನರಿಗಿರುವ ಅಭಿಮಾನ ನೆನಪಾಯಿತು. ಇನ್ಫಾಂಟಿನೊ ಅವರನ್ನು ಭೇಟಿಯಾದಾಗ ಅನಿರೀಕ್ಷಿತವಾಗಿ ಈ ಜೆರ್ಜಿ ನೀಡಿದ್ದಾರೆ. ಅವರ ಪ್ರೀತಿಗೆ ಅಭಾರಿಯಾಗಿದ್ದೇನೆ’ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು