ಭಾನುವಾರ, ಏಪ್ರಿಲ್ 2, 2023
32 °C

FIFA World Cup | ಫೈನಲ್‌ನಲ್ಲಿ ಕಣಕ್ಕಿಳಿದ ರಬಿಯೊ, ಮರಿಯೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೋಹಾ: ಫ್ರಾನ್ಸ್‌ ತಂಡದ ಮಿಡ್‌ಫೀಲ್ಡರ್‌ ಅಡ್ರಿಯಾನ್‌ ರಬಿಯೊ ಮತ್ತು ಸೆಂಟರ್‌ ಬ್ಯಾಕ್‌ ಆಟಗಾರ ಡಯೊ ಉಪಮೆಕಾನೊ ಅವರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಅರ್ಜೆಂಟೀನಾ ವಿರುದ್ಧದ ಫೈನಲ್‌ನಲ್ಲಿ ಕಣಕ್ಕಿಳಿದರು.

ವೈರಾಣು ಸೋಂಕಿಗೆ ತುತ್ತಾಗಿದ್ದ ಇವರಿಬ್ಬರು ಮೊರೊಕ್ಕೊ ವಿರುದ್ಧದ ಸೆಮಿಫೈನಲ್‌ ಪಂದ್ಯದಲ್ಲಿ ಆಡಿರಲಿಲ್ಲ. ಫ್ರಾನ್ಸ್‌ ಕೋಚ್‌ ದಿದಿಯರ್‌ ದೆಶಾಂಪ್‌ ಅವರು ಸೆಮಿಯಲ್ಲಿ ಆಡಿದ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾತ್ರ ಮಾಡಿದ್ದಾರೆ.

ರಬಿಯೊ ಮತ್ತು ಉಪಮೆಕಾನೊ ಅವರಿಗಾಗಿ ಯೂಸುಫ್‌ ಫೊಫಾನ ಹಾಗೂ ಇಬ್ರಾಹಿಮಾ ಕೊನಾತೆ ಅವರು ಜಾಗ ಬಿಟ್ಟುಕೊಟ್ಟಿದ್ದಾರೆ. ಅನಾರೋಗ್ಯದ ಕಾರಣ ಶುಕ್ರವಾರ ಅಭ್ಯಾಸದ ಅವಧಿಗೆ ಗೈರಾಗಿದ್ದ ರಫೇಲ್‌ ವರೇನ್‌ ಅವರು ಆರಂಭಿಕ ಇಲೆವೆನ್‌ನಲ್ಲಿ ಕಾಣಿಸಿಕೊಂಡರು.

ಅರ್ಜೆಂಟೀನಾ ಕೋಚ್‌ ಲಯೊನೆಲ್‌ ಸ್ಕಾಲೊನಿ ಅವರು ಫೈನಲ್‌ ಪಂದ್ಯಕ್ಕೆ ತಂಡದಲ್ಲಿ ಒಂದು ಬದಲಾವಣೆ ಮಾಡಿದ್ದಾರೆ. ಅನುಭವಿ ಏಂಜೆಲ್‌ ಡಿ ಮರಿಯಾ ಅವರು ಸ್ಥಾನ ಪಡೆದಿದ್ದು, ಲಿಯಾಂಡ್ರೊ ಪರೆಡೆಸ್‌ ಬದಲು ಆರಂಭಿಕ ಇಲೆವೆನ್‌ನಲ್ಲಿ ಕಣಕ್ಕಿಳಿದರು. 

ಡಿ ಮರಿಯಾ, ಲಯೊನೆಲ್‌ ಮೆಸ್ಸಿ ಮತ್ತು ಜೂಲಿಯನ್‌ ಅಲ್ವಾರೆಜ್‌ ಅವರು ಅರ್ಜೆಂಟೀನಾ ಫಾರ್ವರ್ಡ್‌ ವಿಭಾಗಕ್ಕೆ ಬಲ ತುಂಬಿದ್ದಾರೆ.

4–3–3 ಮಾದರಿ: ಲುಸೈಲ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಉಭಯ ತಂಡಗಳೂ 4–3–3 ಮಾದರಿಯಲ್ಲಿ ಆಟ ಆರಂಭಿಸಿದವು. ನಾಲ್ವರು ಡಿಫೆಂಡರ್‌ಗಳು ಮತ್ತು ಮೂವರು ಸ್ಟ್ರೈಕರ್‌ಗಳೊಂದಿಗೆ
ಕಣಕ್ಕಿಳಿದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು