ಅಹಮದಾಬಾದ್: ಭಾರತ ತಂಡದವರು ಹೀರೊ ಇಂಟರ್‌ಕಾಂಟಿನೆಂಟಲ್ ಕಪ್ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಸೋತಿದ್ದಾರೆ.

ಶನಿವಾರ ನಡೆದ ಹಣಾಹಣಿಯಲ್ಲಿ ಸುನಿಲ್ ಚೆಟ್ರಿ ಮುಂದಾಳತ್ವದ ಭಾರತ 2–5 ಗೋಲುಗಳಿಂದ ಉತ್ತರ ಕೊರಿಯಾ ಎದುರು ಶರಣಾಯಿತು.

ಭಾರತದ ಪರ ಲಾಲಿಯಾಂಜುವಾಲ ಚಾಂಗ್ಟೆ ಮತ್ತು ಚೆಟ್ರಿ ಕ್ರಮವಾಗಿ 51 ಮತ್ತು 71ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.

ಉತ್ತರ ಕೊರಿಯಾ ತಂಡದ ಜಾಂಗ್ ಇಲ್ ಗ್ವಾನ್ (8 ಮತ್ತು 29), ಸಿಮ್ ಹ್ಯೂನ್ ಜಿನ್ (16), ರಿ ಉನ್ ಚೋಲ್ (63), ರಿ ಹ್ಯೂನ್ ಜಿನ್ (90+2) ಕಾಲ್ಚಳಕ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.