ಫುಟ್‌ಬಾಲ್‌: ಭಾರತಕ್ಕೆ ನಿರಾಸೆ

7

ಫುಟ್‌ಬಾಲ್‌: ಭಾರತಕ್ಕೆ ನಿರಾಸೆ

Published:
Updated:

ಅಮ್ಮಾನ್‌, ಜೋರ್ಡನ್‌: 16 ವರ್ಷದೊಳಗಿನವರ ಭಾರತ ಫುಟ್‌ಬಾಲ್‌ ತಂಡವು ಇಲ್ಲಿ ನಡೆಯುತ್ತಿರುವ ಐದನೇ ಆವೃತ್ತಿಯ ವೆಸ್ಟ್‌ ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಡಬ್ಲ್ಯುಎಎಫ್‌ಎಫ್‌) ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಸೋತಿದೆ.

ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 1–2ರಿಂದ ಜಪಾನ್‌ ವಿರುದ್ಧ ಮಣಿಯಿತು. 

ಪಂದ್ಯದ 26ನೇ ನಿಮಿಷದಲ್ಲಿ ಭಾರತ ತಂಡದ ವಿಕ್ರಮ್‌ ಪ್ರತಾಪ್‌ ಸಿಂಗ್ ಅವರು ಗೋಲು ಗಳಿಸಿ 1–0ಯ ಮುನ್ನಡೆ ತಂದುಕೊಟ್ಟರು. ನಂತರ ಎರಡೂ ತಂಡಗಳು ಆಕ್ರಮಣಕಾರಿ ಆಟಕ್ಕೆ ಅಣಿಯಾದವು. ಇದರಿಂದಾಗಿ ಉಭಯ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ವಿರಾಮದ ಹೊತ್ತಿಗೆ ಭಾರತ 1–0ಯ ಮುನ್ನಡೆ ಹೊಂದಿತ್ತು. 

ಆದರೆ, ದ್ವಿತೀಯಾರ್ಧದಲ್ಲಿ ಜಪಾನ್‌ ತಂಡವು ತಿರುಗೇಟು ನೀಡಿತು. ಜಪಾನ್‌ ತಂಡದ ಕುರಾಬಾ ಕೊಂಡೊ ಅವರು 57ನೇ ನಿಮಿಷದಲ್ಲಿ ಗೋಲು ದಾಖಲಿಸಿ 1–1ರ ಸಮಬಲಕ್ಕೆ ಕಾರಣರಾದರು. ನಂತರ 64ನೇ ನಿಮಿಷದಲ್ಲಿ ಶೊಜಿ ತೊಯಮಾ, ಚೆಂಡನ್ನು ಗುರಿ ಮುಟ್ಟಿಸಿ ತಂಡವು 2–1ರ ಮುನ್ನಡೆ ಹೊಂದಲು ನೆರವಾದರು.

ಇದಾದ ನಂತರ, ಭಾರತ ತಂಡ ಗೋಲು ಗಳಿಸಲು ಅನೇಕ ಬಾರಿ ಪ್ರಯತ್ನಿಸಿತು. ಆದರೆ, ಎದುರಾಳಿ ಪಡೆಯ ರಕ್ಷಣಾ ಕೋಟೆ ಬೇಧಿಸಲು ಅದು ವಿಫಲವಾಯಿತು. ಹೀಗಾಗಿ, ಜಪಾನ್‌ ಪಂದ್ಯ ಜಯಿಸಿತು.

ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡವು 4–0ಯಿಂದ ಜೋರ್ಡನ್‌ ಎದುರು ಗೆದ್ದಿತ್ತು. ಇಂದು ನಡೆಯುವ ಮೂರನೇ ಹಣಾಹಣಿಯಲ್ಲಿ ಭಾರತ ತಂಡವು ಇರಾಕ್‌ ಎದುದು ಸೆಣಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !