ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐ ಲೀಗ್‌ ಫುಟ್‌ಬಾಲ್‌: ಕತ್ಸುಮಿ ಮೋಡಿ

Last Updated 15 ಡಿಸೆಂಬರ್ 2018, 18:30 IST
ಅಕ್ಷರ ಗಾತ್ರ

ಇಂಫಾಲ: ಜಪಾನ್‌ನ ಮಿಡ್‌ಫೀಲ್ಡರ್‌ ಕತ್ಸುಮಿ ಯೂಸಾ ಅವರ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ನೆರವಿನಿಂದ ನೆರೋಕಾ ಎಫ್‌ಸಿ ತಂಡ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.

ಶನಿವಾರ ನಡೆದ ಹಣಾಹಣಿಯಲ್ಲಿ ನೆರೋಕಾ ಎಫ್‌ಸಿ 2–1 ಗೋಲುಗಳಿಂದ ಚರ್ಚಿಲ್‌ ಬ್ರದರ್ಸ್‌ ತಂಡವನ್ನು ಸೋಲಿಸಿತು.

ಈ ಗೆಲುವಿನೊಂದಿಗೆ ನೆರೋಕಾ ತಂಡ ಒಟ್ಟು ಪಾಯಿಂಟ್ಸ್‌ ಅನ್ನು 14ಕ್ಕೆ ಹೆಚ್ಚಿಸಿಕೊಂಡು, ಪಾಯಿಂಟ್ಸ್‌ ಪಟ್ಟಿಯಲ್ಲಿ ಜಂಟಿಯಾಗಿ ಎರಡನೇ ಸ್ಥಾನಕ್ಕೇರಿದೆ. ಚೆನ್ನೈ ಸಿಟಿ ಎಫ್‌ಸಿ ಅಗ್ರಸ್ಥಾನದಲ್ಲಿದೆ. ಈ ತಂಡದ ಖಾತೆಯಲ್ಲಿ 17 ಪಾಯಿಂಟ್ಸ್‌ ಇವೆ.

ಆರಂಭದಿಂದಲೇ ವೇಗದ ಆಟಕ್ಕೆ ಮುಂದಾದ ನೆರೋಕಾ ತಂಡ ಮೊದಲ ನಿಮಿಷದಲ್ಲೇ ಖಾತೆ ತೆರೆಯಿತು. ಅರೇನ್‌ ವಿಲಿಯಮ್ಸ್‌ ತಮ್ಮತ್ತ ಒದ್ದು ಕಳುಹಿಸಿದ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ ಕತ್ಸುಮಿ ಅದನ್ನು ಚುರುಕಾಗಿ ಗುರಿ ಮುಟ್ಟಿಸಿದರು. 37ನೇ ನಿಮಿಷದಲ್ಲಿ ಚರ್ಚಿಲ್‌ ಸಮಬಲ ಸಾಧಿಸಿತು. ಈ ತಂಡದ ಖಾಲಿದ್‌ ಆಚೊ ಗೋಲು ಹೊಡೆದರು.

ದ್ವಿತೀಯಾರ್ಧದಲ್ಲಿ ಉಭಯ ತಂಡಗಳು ಮುನ್ನಡೆ ಗೋಲು ಗಳಿಸಲು ಜಿದ್ದಾಜಿದ್ದಿನ ಪೈಪೋಟಿ ನಡೆಸಿದವು. 87ನೇ ನಿಮಿಷದಲ್ಲಿ ನೆರೋಕಾ ತಂಡಕ್ಕೆ ಯಶಸ್ಸು ಒಲಿಯಿತು. ಕತ್ಸುಮಿ, ಕಾಲ್ಚಳಕ ತೋರಿ ಸಂಭ್ರಮಿಸಿದರು.

ರಿಯಲ್‌ ಕಾಶ್ಮೀರ್‌ ಮತ್ತು ಗೋಕುಲಮ್‌ ಎಫ್‌ಸಿ ನಡುವಣ ದಿನದ ಇನ್ನೊಂದು ಪಂದ್ಯ 1–1 ಗೋಲುಗಳಿಂದ ಸಮಬಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT