ಚಿಯಾಂಗ್ ಮೈ (ಥಾಯ್ಲೆಂಡ್): ಭಾರತದ ಮಹಿಳಾ ಫುಟ್ಬಾಲ್ ತಂಡ ಮತ್ತೊಮ್ಮೆ ಅಧಿಕಾರಯುತ ಆಟದ ಪ್ರದರ್ಶನ ನೀಡಿ ಎಎಫ್ಸಿ ಮಹಿಳಾ ಏಷ್ಯನ್ ಕಪ್ 2026ರ ಕ್ವಾಲಿಫೈಯರ್ ಪಂದ್ಯದಲ್ಲಿ ಇರಾಕ್ ತಂಡವನ್ನು 5–0 ಗೋಲುಗಳಿಂದ ಸದೆಬಡಿಯಿತು.

‘ಬಿ’ ಗುಂಪಿನ ಈ ಪಂದ್ಯದಲ್ಲಿ ವಿರಾಮದ ವೇಳೆಗೆ ಭಾರತ 2–0 ಮುನ್ನಡೆ ಪಡೆದಿತ್ತು.

ಸಂಗೀತಾ ಬಾಸ್ಫೋರೆ ಮತ್ತು ಮನಿಶಾ ಮೊದಲಾರ್ಧದಲ್ಲಿ ಗೋಲುಗಳನ್ನು ಗಳಿಸಿದರು. ವಿರಾಮದ ಬಳಿಕ ಕಾರ್ತಿಕಾ ಅಂಗಮುತ್ತು, ಫನ್ಜೌಬಾಮ್ ನಿರ್ಮಲಾ ದೇವಿ ಮತ್ತು ನೊಂಗ್ಮೈಥೆಮ್ ರತ್ನಬಾಲಾದೇವಿ ಅವರು ವಿಜಯದ ಅಂತರ ಹೆಚ್ಚಿಸಿದರು.

ಈ ಮೂಲಕ ‘ಬ್ಲೂ ಟೈಗ್ರೆಸ್’ ತಂಡ ಅಜೇಯವಾಗಿ ಉಳಿದಿದ್ದು ಮೂರು ಪಂದ್ಯಗಳಲ್ಲಿ 22 ಗೋಲುಗಳನ್ನು ಗಳಿಸಿದಂತಾಗಿದೆ. ಎದುರಾಳಿಗೆ ಒಮ್ಮೆಯೂ ಗೋಲು ಬಿಟ್ಟುಕೊಟ್ಟಿಲ್ಲ.

ಆತಿಥೇಯ ಥಾಯ್ಲೆಂಡ್ ಆರು ಪಾಯಿಂಟ್ ಗಳಿಸಿ ಗುಂಪಿನಲ್ಲಿ ಸದ್ಯ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಶನಿವಾರ ಭಾರತ ಮತ್ತು ಥಾಯ್ಲೆಂಡ್ ನಡುವಣ ಪಂದ್ಯ ಕುತೂಹಲಕ್ಕೆ ಕಾರಣವಾಗಿದೆ. ಪ್ರತಿ ಗುಂಪಿನ ವಿಜೇತ ತಂಡ ಮಾತ್ರ ಮುಂದಿನ ಸುತ್ತು ತಲುಪುವ ಕಾರಣ ಈ ಪಂದ್ಯ ನಿರ್ಣಾಯಕವಾಗುವ ಸಾಧ್ಯತೆಯಿದೆ.

ಭಾರತ ಈ ಮೊದಲಿನ ಪಂದ್ಯಗಳಲ್ಲಿ ಮಂಗೋಲಿಯಾ ವಿರುದ್ಧ 13–0 ಯಿಂದ, ತೈಮೋರ್ ಲೆಸ್ಟೆ ವಿರುದ್ಧ 4–0 ಗೋಲುಗಳ ಜಯಪಡೆದಿದ್ದು, ಇರಾಕ್ ಎದುರು ಆತ್ಮವಿಶ್ವಾಸದಿಂದ ಕಣಕ್ಕಿಳಿದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.