ಕೌಲೂನ್, ಹಾಂಗ್ಕಾಂಗ್: ಭಾರತ ಪುರುಷರ ಫುಟ್ಬಾಲ್ ತಂಡವು ಮಂಗಳವಾರ ಇಲ್ಲಿ ನಡೆಯಲಿರುವ ಎಎಫ್ಸಿ ಏಷ್ಯನ್ ಕಪ್ ಅರ್ಹತಾ ಸುತ್ತಿನ ನಿರ್ಣಾಯಕ ಪಂದ್ಯದಲ್ಲಿ ಆತಿಥೇಯ ಹಾಂಗ್ಕಾಂಗ್ ತಂಡವನ್ನು ಎದುರಿಸಲಿದೆ.

ಉಭಯ ತಂಡಗಳಿಗೆ ನಿರ್ಣಾಯಕವಾಗಿರುವ ಈ ಪಂದ್ಯದ ಎಲ್ಲಾ 50,000 ಟಿಕೆಟ್ಗಳು ಮಾರಾಟವಾಗಿದ್ದು, ಹಾಂಗ್ಕಾಂಗ್ ಫುಟ್ಬಾಲ್ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ವಿಶ್ವ ರ್ಯಾಂಕಿಂಗ್ನಲ್ಲಿ 127ನೇ ಸ್ಥಾನದಲ್ಲಿರುವ ಭಾರತ ತಂಡವು ಸಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಾಂಗ್ಲಾದೇಶ, ಹಾಂಗ್ಕಾಂಗ್ ಮತ್ತು ಸಿಂಗಪುರ ತಂಡಗಳು ಸಹ ಇದೇ ಗುಂಪಿನಲ್ಲಿವೆ.

ಮನೊಲೊ ಮಾರ್ಕ್ವೆಝ್ ಮಾರ್ಗದರ್ಶನದ ಭಾರತ ತಂಡವು ಮಾರ್ಚ್ನಲ್ಲಿ ಶಿಲ್ಡಾಂಗ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಗೋಲಿಲ್ಲದೆ ಡ್ರಾ ಸಾಧಿಸಿತ್ತು. ಭಾರತ ತಂಡವು ಇದೀಗ ಮೊದಲ ಗೆಲುವಿನ ಛಲದಲ್ಲಿದೆ.

ಮತ್ತೊಂದೆಡೆ, ಹಾಂಗ್ಕಾಂಗ್ ತಂಡವು ಮಾರ್ಚ್ನಲ್ಲಿ ನಡೆದ ಪಂದ್ಯದಲ್ಲಿ ಸಿಂಗಪುರ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡಿದೆ. ಇಂಗ್ಲೆಂಡ್ನ ಆಶ್ಲೆ ವೆಸ್ಟ್ವುಡ್ ಮಾರ್ಗದರ್ಶನದ ಈ ತಂಡವು ತವರಿನ ಪ್ರೇಕ್ಷಕರ ಬೆಂಬಲದ ಲಾಭ ಪಡೆದು, ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.

ಹಾಂಗ್ಕಾಂಗ್ಗೆ ಈ ಪಂದ್ಯ ಐತಿಹಾಸಿಕವಾಗಿರಲಿದೆ. 59 ವರ್ಷಗಳಲ್ಲಿ ಎರಡನೇ ಬಾರಿ ಎಎಫ್ಸಿ ಏಷ್ಯನ್ ಕಪ್ ಟೂರ್ನಿಗೆ ಸ್ಥಾನ ಪಡೆಯಲು ನಿರ್ಣಾಯಕ ಅರ್ಹತಾ ಪಂದ್ಯ ಆಡುತ್ತಿದೆ.

ಕೈ ತಕ್ ಸ್ಪೋರ್ಟ್ಸ್ ಪಾರ್ಕ್ನ ಭಾಗವಾಗಿರುವ 50,000 ಆಸನಗಳ ಕೈ ತಕ್ ಸ್ಟೇಡಿಯಂನ ಉದ್ಘಾಟನಾ ಪಂದ್ಯ ಇದಾಗಿದೆ.

1951ರಲ್ಲಿ ಭಾರತ ಮತ್ತು ಹಾಂಗ್ಕಾಂಗ್ ತಂಡಗಳು ಮೊದಲ ಬಾರಿ ಮುಖಾಮುಖಿಯಾಗಿದ್ದವು. ಈತನಕದ 24 ಪಂದ್ಯಗಳಲ್ಲಿ ಭಾರತ ಒಂಬತ್ತು, ಹಾಂಗ್ಕಾಂಗ್ ಎಂಟರಲ್ಲಿ ಗೆಲುವು ಸಾಧಿಸಿವೆ. ಏಳು ಪಂದ್ಯಗಳು ಡ್ರಾನಲ್ಲಿ ಮುಕ್ತಾಯವಾಗಿವೆ.

ಭಾರತವು ಹಾಂಗ್ಕಾಂಗ್ ನೆಲದಲ್ಲಿ ಒಮ್ಮೆ ಮಾತ್ರ ಜಯ ಸಾಧಿಸಿದೆ. 1957ರಲ್ಲಿ ನಡೆದ ಸೌಹಾರ್ದ ಪಂದ್ಯದಲ್ಲಿ 2–1ರಿಂದ ಆತಿಥೇಯ ತಂಡವನ್ನು ಮಣಿಸಿತ್ತು. ಉಭಯ ತಂಡಗಳು ಕೊನೆಯ ಬಾರಿ 2022ರ ಏಷ್ಯನ್ ಕಪ್ ಅರ್ಹತಾ ಪಂದ್ಯದಲ್ಲಿ (ಕೋಲ್ಕತ್ತ) ಮುಖಾಮುಖಿಯಾಗಿದ್ದು, ಮಳೆಯಿಂದ ಅಡಚಣೆಯಾದ ಪಂದ್ಯವನ್ನು 4–0 ಗೋಲುಗಳಿಂದ ಭಾರತ ಗೆದ್ದಿತ್ತು.

ಬೆಂಗಳೂರು ಎಫ್ಸಿ, ಎಟಿಕೆ ಫುಟ್ಬಾಲ್ ಕ್ಲಬ್ ಮತ್ತು ಪಂಜಾಬ್ ಎಫ್ಸಿ ತಂಡಕ್ಕೆ ಮಾರ್ಗದರ್ಶನ ನೀಡಿದ್ದ ಆಶ್ಲೆ ಅವರು ಭಾರತದ ಆಟಗಾರರ ಸಾಮರ್ಥ್ಯ ಅರಿತಿದ್ದಾರೆ. ಕಳೆದ ವರ್ಷ ಅವರ ಮಾರ್ಗದರ್ಶನದಲ್ಲಿ ಅಫ್ಗಾನಿಸ್ತಾನ ತಂಡವು ಫಿಫಾ ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಭಾರತವನ್ನು ಸೋಲಿಸಿತ್ತು. ನಂತರ ಹಾಂಗ್ಕಾಂಗ್ ತಂಡವನ್ನು ಅವರು ಸೇರಿಕೊಂಡಿದ್ದಾರೆ. ಅವರ ಗರಡಿಯಲ್ಲಿ ಪಳಗಿದ ತಂಡವು 12 ಪಂದ್ಯಗಳಲ್ಲಿ ಒಮ್ಮೆ ಮಾತ್ರ ಸೋತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.