ಭಾರತ ತಂಡಕ್ಕೆ ತಜಿಕಿಸ್ತಾನ ಸವಾಲು

ಭಾನುವಾರ, ಜೂನ್ 16, 2019
28 °C
ಹೀರೊ ಕಪ್‌ ಫುಟ್‌ಬಾಲ್‌ ಟೂರ್ನಿ

ಭಾರತ ತಂಡಕ್ಕೆ ತಜಿಕಿಸ್ತಾನ ಸವಾಲು

Published:
Updated:

ನವದೆಹಲಿ: ಹೀರೋ ಇಂಟರ್‌ನ್ಯಾಷನಲ್‌ ಕಪ್‌ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಜಿಕಿಸ್ತಾನದ ಸವಾಲು ಎದುರಿಸಲಿದೆ. ಅಹ್ಮದಾಬಾದ್‌ನಲ್ಲಿ ಜುಲೈ 7ರಿಂದ 18ರವರೆಗೆ ಟೂರ್ನಿ ನಡೆಯಲಿದೆ.

ಜುಲೈ 7ರಂದು ತಜಕಿಸ್ತಾನದ ಎದುರು ಆಡಿದ ಬಳಿಕ, ಜುಲೈ 13ರಂದು ಉತ್ತರ ಕೊರಿಯಾ ಹಾಗೂ 16ರಂದು ಸಿರಿಯಾ ವಿರುದ್ಧ ಭಾರತ ಕಣಕ್ಕಿಳಿಯಲಿದೆ.

ರೌಂಡ್‌ ರಾಬಿನ್‌ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ಎರಡು ತಂಡಗಳು ಜುಲೈ 18ರಂದು ನಡೆಯುವ ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗುವವು.

ಎಪ್ರಿಲ್‌ನಲ್ಲಿ ಬಿಡುಗಡೆಯಾಗಿರುವ ಫಿಫಾ ರ‍್ಯಾಂಕಿಂಗ್‌ ಪ್ರಕಾರ ಸಿರಿಯಾ 83ನೇ ಸ್ಥಾನದಲ್ಲಿದೆ. ತಜಿಕಿಸ್ತಾನ ಹಾಗೂ ಉತ್ತರ ಕೊರಿಯಾದ ಸ್ಥಾನಗಳು ಕ್ರಮವಾಗಿ 120 ಹಾಗೂ 121.

ಭಾರತ 101ನೇ ಸ್ಥಾನದಲ್ಲಿರುವ ಭಾರತ ಹೋದ ವರ್ಷ ಈ ಟೂರ್ನಿಯ ಚಾಂಪಿಯನ್‌ ಆಗಿತ್ತು. ಫೈನಲ್‌ ಪಂದ್ಯದಲ್ಲಿ ಕೀನ್ಯಾ ತಂಡವನ್ನು ಸೋಲಿಸಿತ್ತು.

ಕಿಂಗ್ಸ್‌ ಕಪ್‌ ಟೂರ್ನಿಯಲ್ಲಿ ಆಡಿದ ಭರವಸೆಯ ಆಟವನ್ನು ಬೆನ್ನಿಗಂಟಿಸಿಕೊಂಡು ಭಾರತ ಈಗ ಹೀರೊ ಇಂಟರ್‌ನ್ಯಾಷನಲ್‌ ಕಪ್‌ ಟೂರ್ನಿಗೆ ಸಿದ್ಧವಾಗಲಿದೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !