ಮುಂಬೈ: ಬೆಂಗಳೂರು ಫುಟ್ಬಾಲ್ ಕ್ಲಬ್ ತಂಡವು ಇದೇ 29ರಂದು ನಡೆಯಲಿರುವ ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಪ್ಲೇಆಫ್ನಲ್ಲಿ ಮುಂಬೈ ಸಿಟಿ ತಂಡವನ್ನು ಎದುರಿಸಲಿದೆ.

ಐಎಸ್ಎಲ್ ಸೆಮಿಫೈನಲ್ (ಡಬಲ್ ಲೆಗ್) ಮತ್ತು ಫೈನಲ್ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಗೊಂಡಿದೆ. ಏಪ್ರಿಲ್ 2ರಿಂದ 7ರವರೆಗೆ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಫೈನಲ್ ಏಪ್ರಿಲ್ 12ರಂದು ನಿಗದಿಯಾಗಿದೆ.

ಮಾರ್ಚ್ 12ರಂದು ಲೀಗ್ ಹಂತ ಮುಕ್ತಾಯಗೊಂಡಿತ್ತು. ಪ್ಲೇ ಆಫ್ ಪಂದ್ಯಗಳು ಇದೇ 29 ಮತ್ತು 30ರಂದು ನಡೆಯಲಿದೆ.

ಮೋಹನ್ ಬಾಗನ್ ಎಸ್ಜಿ ತಂಡ ಸತತ ಎರಡನೇ ಬಾರಿ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ. ಟೂರ್ನಿಯಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎನಿಸಿದೆ.

ಮೋಹನ್ ಬಾಗನ್ ಎಸ್ಜಿ ತಂಡದ ಜೊತೆಗೆ ಎಸ್ಸಿ ಗೋವಾ (2ನೇ ಸ್ಥಾನ), ಬೆಂಗಳೂರು ಎಫ್ಸಿ (3ನೇ ಸ್ಥಾನ), ನಾರ್ಥ್ ಈಸ್ಟ್ ಯುನೈಟೆಡ್ ಎಫ್ಸಿ (4ನೇ ಸ್ಥಾನ), ಜೆಮ್ಶಡ್ಪುರ ಎಫ್ಸಿ (5ನೇ ಸ್ಥಾನ) ಮತ್ತು ಮುಂಬೈ ಸಿಟಿ ಎಫ್ಸಿ (6ನೇ ಸ್ಥಾನ) ಈ ಎಲ್ಲಾ ತಂಡಗಳು ಪ್ಲೆ ಆಫ್ ಸ್ಥಾನಗಳನ್ನು ಖಚಿತಪಡಿಸಿಕೊಂಡಿವೆ.

ಪ್ಲೇ ಆಫ್ ವೇಳಾಪಟ್ಟಿ

ದಿನಾಂಕ : ಹಂತ : ತಂಡಗಳು

ಮಾ.29;ನಾಕೌಟ್ 1; ಬೆಂಗಳೂರು ಎಫ್ಸಿ –ಮುಂಬೈ ಸಿಟಿ ಎಫ್ಸಿ

ಮಾ.30; ನಾಕೌಟ್2;ನಾರ್ಥ್ ಈಸ್ಟ್ ಯುನೈಟೆಡ್ ಎಫ್ಸಿ – ಜಮ್ಶಡ್ಪುರ ಎಫ್ಸಿ

ಏ.2 ;ಸೆಮಿಫೈನಲ್ 1(ಮೊದಲ ಲೆಗ್)– ನಾಕೌಟ್ 1ರ ಗೆದ್ದ ತಂಡ – ಎಫ್ಸಿ ಗೋವಾ

ಏ.3: ಸೆಮಿಫೈನಲ್ 2(ಮೊದಲ ಲೆಗ್)– ನಾಕೌಟ್ 2ರ ಗೆದ್ದ ತಂಡ– ಮೋಹನ್ ಬಾಗನ್

ಏ.6;ಸೆಮಿಫೈನಲ್ 1 (ಎರಡನೆ ಲೆಗ್)– ಎಫ್ಸಿ ಗೋವಾ – ನಾಕೌಟ್ 1ರ ಗೆದ್ದ ತಂಡ

ಏ.7; ಸೆಮಿಫೈನಲ್ 2 (ಎರಡನೇ ಲೆಗ್)– ಮೋಹನ್ ಬಾಗನ್ ಎಸ್ಜಿ (ತವರು)–ನಾಕೌಟ್ 2ರ ತಂಡ

ಏ.12 ಫೈನಲ್: ಸೆಮಿಫೈನಲ್ 1ರಲ್ಲಿ ಗೆದ್ದ ತಂಡ– ಸೆಮಿಫೈನಲ್ 2ರಲ್ಲಿ ಗೆದ್ದ ತಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.