ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಠೀರವದಲ್ಲೇ ಐಎಸ್‌ಎಲ್‌ ಪಂದ್ಯಗಳು?

20ರಂದು ಆರನೇ ಆವೃತ್ತಿಯ ಪಂದ್ಯಗಳು ಆರಂಭ: ಬಿಎಫ್‌ಸಿಗೆ 21ರಂದು ಮೊದಲ ಪಂದ್ಯ
Last Updated 3 ಅಕ್ಟೋಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಇಂಡಿಯನ್‌ ಸೂಪರ್ ಲೀಗ್ (ಐಎಸ್‌ಎಲ್) ಫುಟ್‌ಬಾಲ್ ಟೂರ್ನಿಯಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್ ಕ್ಲಬ್‌ (ಬಿಎಫ್‌ಸಿ), ಟೂರ್ನಿಯ ಆರನೇ ಆವೃತ್ತಿಯ ಪಂದ್ಯಗಳನ್ನು ಬೆಂಗಳೂರಿನಲ್ಲೇ ಆಡುವ ಸಾಧ್ಯತೆಗಳು ನಿಚ್ಚಳವಾಗಿವೆ.

‘ಬಿಎಫ್‌ಸಿಯ ಮಾಲೀಕರಾದ ಜೆಎಸ್‌ಡಬ್ಲ್ಯು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಳೆದ ತಿಂಗಳ 26ರಂದು ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ನಡೆದಿದೆ. ನ್ಯಾಯಾಲಯದ ಆದೇಶದ ಪ್ರಕಾರ, ಪಂದ್ಯಗಳು ಇರುವ ದಿನ ಕ್ರೀಡಾಂಗಣವನ್ನು ಜೆಎಸ್‌ಡಬ್ಲ್ಯುಗೆ ಒದಗಿಸಲು ನಿರ್ಧರಿಸಲಾಗಿದೆ’ ಎಂದು ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್ ಗುರುವಾರ ‘ಪ್ರಜಾವಾಣಿ’ಗೆ ತಿಳಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಫುಟ್‌ಬಾಲ್‌ಗೆ ಅವಕಾಶ ನೀಡಬಾರದು ಎಂದು ಕೋರಿ ಅಥ್ಲೆಟಿಕ್‌ ಕೋಚ್‌ಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರತಿಭಟನೆಯನ್ನೂ ನಡೆಸಿದ್ದರು. ಪ್ರತಿಭಟನೆಯ ಹಿನ್ನೆಲೆಯಲ್ಲಿ ಜೆಎಸ್‌ಡಬ್ಲ್ಯು ಪುಣೆಯ ಶಿವ ಛತ್ರಪತಿ ಕ್ರೀಡಾಂಗಣವನ್ನು ತವರು ಅಂಗಣವಾಗಿ ಆರಿಸಿಕೊಂಡಿತ್ತು. ಆದರೂ ಬೆಂಗಳೂರಿನಲ್ಲೇ ತವರಿನ ಪಂದ್ಯಗಳನ್ನು ಆಡಲು ಪ್ರಯತ್ನ ನಡೆಯುತ್ತಿತ್ತು. ಈಗಿನ ಬೆಳವಣಿಗೆ ಬಗ್ಗೆ ತಂಡದ ಆಡಳಿತವನ್ನು ಕೇಳಿದಾಗ ‘ಯಾವುದೇ ಸಂದರ್ಭದಲ್ಲಿ ಏನೂ ನಡೆಯುವ ಸಾಧ್ಯತೆ ಇರುವುದರಿಂದಸದ್ಯ ಏನನ್ನೂ ಹೇಳುವುದಿಲ್ಲ’ ಎಂಬ ಉತ್ತರ ಬಂತು.

ಐಎಸ್‌ಎಲ್‌ ಪಂದ್ಯಗಳು ಇದೇ 20ರಂದು ಆರಂಭವಾಗಲಿದ್ದು 21ರಂದು ಬಿಎಫ್‌ಸಿ ತನ್ನ ಮೊದಲ ಪಂದ್ಯವನ್ನು ನಾರ್ತ್ ಈಸ್ಟ್ ಯುನೈಟೆಡ್ ವಿರುದ್ಧ ಆಡಲಿದೆ. ಐಎಸ್‌ಎಲ್‌ ವೆಬ್‌ಸೈಟ್‌ನಲ್ಲಿ ವೇಳಾಪಟ್ಟಿ ಪ್ರಕಟಿಸಲಾಗಿದ್ದರೂ ಸ್ಥಳವನ್ನು ನಿಗದಿ ಮಾಡಲಿಲ್ಲ.

ಬಿಎಫ್‌ಸಿ ಮೊದಲ ಪಂದ್ಯ ತವರಿನಲ್ಲಿ ಆಡಲಿದೆಯೇ ಅಥವಾ ನಾರ್ತ್ ಈಸ್ಟ್ ಯುನೈಟೆಡ್ ತಂಡದ ತವರು ಗುವಾಹಟಿಯಲ್ಲಿ ಆಡಲಿದೆಯೇ ಎಂಬುದು ಇನ್ನೂ ನಿಗದಿಯಾಗಲಿಲ್ಲ. ಸ್ಥಳದ ಮಾಹಿತಿ ಪ್ರಕಟಗೊಂಡ ಮೇಲಷ್ಟೇ ಚಿತ್ರಣ ಸ್ಪಷ್ಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT