ಸೋಮವಾರ, ಜುಲೈ 4, 2022
25 °C
ಮ್ಯಾನ್ಮಾರ್‌ಗೆ ಸೋಲು

ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿ: ಜಪಾನ್‌ಗೆ ಭರ್ಜರಿ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪುಣೆ: ಹಾಲಿ ಚಾಂಪಿಯನ್ ತಂಡವು ಎಎಫ್‌ಸಿ ಏಷ್ಯಾಕಪ್ ಮಹಿಳಾ ಫುಟ್‌ಬಾಲ್ ಟೂರ್ನಿಯಲ್ಲಿ ಭರ್ಜರಿ ಆರಂಭ ಮಾಡಿದೆ. ಶುಕ್ರವಾರ ನಡೆದ ಪಂದ್ಯದಲ್ಲಿ ಆ ತಂಡವು 5–0ಯಿಂದ ಮ್ಯಾನ್ಮಾರ್‌ ತಂಡವನ್ನು ಸೋಲಿಸಿತು.

ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ನಡೆದ ‘ಸಿ’ ಗುಂಪಿನ ಈ ಹಣಾಹಣಿಯಲ್ಲಿ ಜಪಾನ್ ಆರಂಭದಿಂದಲೇ ಪಾರಮ್ಯ ಮೆರೆಯಿತು.

ವಿಜೇತ ತಂಡದ ಪರ ಯುಯಿ ಹಸೆಗವಾ (47 ಮತ್ತು 90+2ನೇ ನಿಮಿಷ), ರಿಕೊ ಯುಕಿ (22ನೇ ನಿಮಿಷ), ಹಿಕಾರು ನಮೊಟೊ (52ನೇ ನಿಮಿಷ) ಮತ್ತು ಯುಯಿ ನರುಮಿಯಾ (70) ಕಾಲ್ಚಳಕ ತೋರಿದರು.

ಮುಂದಿನ ಪಂದ್ಯದಲ್ಲಿ ಜಪಾನ್‌ ತಂಡವು ಸೋಮವಾರ ವಿಯೆಟ್ನಾಂ ತಂಡವನ್ನೂ, ಮ್ಯಾನ್ಮಾರ್‌, ಕೊರಿಯಾ ತಂಡವನ್ನೂ ಎದುರಿಸಲಿವೆ.

ಆಸ್ಟ್ರೇಲಿಯಾಗೆ ಭರ್ಜರಿ ಜಯ: ‘ಬಿ’ ಗುಂಪಿನ ಪಂದ್ಯದಲ್ಲಿ ಸಮಂತಾ ಕೆರ್‌ (9, 11, 26, 36, 54ನೇ ನಿ.) ಮತ್ತು ಎಮಿಲಿ ವಾನ್‌ ಎಗ್‌ಮಂಡ್‌ (39, 57, 59, 69ನೇ ನಿ.) ಗಳಿಸಿದ ಗೋಲುಗಳ ನೆರವಿನಿಂದ ಆಸ್ಟ್ರೇಲಿಯಾ ಇಂಡೊನೇಷ್ಯಾ ಎದುರು 18–0 ಗೋಲುಗಳಿಂದ ಗೆದ್ದಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು