ಉತ್ತಪ್ಪ ಹ್ಯಾಟ್ರಿಕ್‌ ಗೋಲು

ಬುಧವಾರ, ಮೇ 22, 2019
29 °C
ಕೊಂಕಣ್‌, ಚಿನ್ನಪ್ಪ ಫುಟ್‌ಬಾಲ್‌ ಕ್ಲಬ್‌ಗಳ ಜಯಭೇರಿ

ಉತ್ತಪ್ಪ ಹ್ಯಾಟ್ರಿಕ್‌ ಗೋಲು

Published:
Updated:

ಬೆಂಗಳೂರು: ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ 'ಸಿ’ ಡಿವಿಜನ್‌ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗುರುವಾರ ನಡೆದ ‘ಐ’ ವಲಯದ ಫುಟ್‌ಬಾಲ್‌ ಪಂದ್ಯದಲ್ಲಿ ಕೊಂಕಣ್‌ ಎಫ್‌ಸಿ ತಂಡವು ಚಿನ್ನಪ್ಪ ಎಫ್‌ಸಿ ತಂಡವನ್ನು 5–1 ಗೋಲುಗಳ ಅಂತರದಿಂದ ಮಣಿಸಿತು. ಕೊಂಕಣ್‌ ಪರ ಅಂತರರಾಷ್ಟ್ರೀಯ ಆಟಗಾರ ಎಸ್‌.ಕೆ.ಉತ್ತಪ್ಪ ಹ್ಯಾಟ್ರಿಕ್‌ ಬಾರಿಸಿದರು.

ಉತ್ತಪ್ಪ ಅವರು ತಂಡದ ಪರ ಒಟ್ಟು ನಾಲ್ಕು ಗೋಲುಗಳನ್ನು (12, 14, 27 ಹಾಗೂ 60ನೇ ನಿಮಿಷ) ಸಿಡಿಸಿ ಗಮನಸೆಳೆದರು. ನಿತಿನ್‌(39ನೇ ನಿಮಿಷ) ಅವರು ಮತ್ತೊಂದು ಗೋಲು ಗಳಿಸಿ ಜಯದಲ್ಲಿ ಅಲ್ಪ ಕಾಣಿಕೆ ನೀಡಿದರು. ಚಿನ್ನಪ್ಪ ಗಾರ್ಡನ್‌ ಎಫ್‌ಸಿ ಪರ ವಿಘ್ನೇಶ್‌ (26ನೇ ನಿಮಿಷ) ಏಕೈಕ ಗೋಲು ಗಳಿಸಿದರು. ಮತ್ತೊಂದು ಪಂದ್ಯದಲ್ಲಿ ಬೆಂಗಳೂರು ಬಾಯ್ಸ್‌ ಎಫ್‌ಸಿ ತಂಡವು ಮಾಡರ್ನ್‌ ಬಾಯ್ಸ್‌ ತಂಡವನ್ನು 2–1 ಗೋಲುಗಳಿಂದ ಮಣಿಸಿತು. ವಿಜೇತ ತಂಡದ ಪರ ಆ್ಯರನ್‌ (20ನೇ ನಿಮಿಷ) ಹಾಗೂ ಇಸಯ್ಯ (52ನೇ ನಿಮಿಷ) ಗೋಲು ಬಾರಿಸಿ ಮಿಂಚಿದರು. ಮಾಡರ್ನ್ ಎಫ್‌ಸಿ ಪರ ಮೋನಿಶ್ (6ನೇ ನಿಮಿಷ) ಗಳು ದಾಖಲಿಸಿದರು.

ಶುಕ್ರವಾರ ನಡೆಯುವ ‘ಜೆ’ ವಲಯದ ಪಂದ್ಯಗಳಲ್ಲಿ ಮುಸ್ಲಿಂ ಹೀರೋಸ್‌ ತಂಡದ ಎದುರು ಅಗರಂ ಎಫ್‌ಸಿ ಹಾಗೂ ಬಸವನಗುಡಿ ಎಫ್‌ಸಿ ವಿರುದ್ಧ ಎಕ್ಸೆಲ್ಸಿಯರ್‌ ಎಫ್‌ಸಿ ತಂಡಗಳು ಸೆಣಸಲಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !