ಗುರುವಾರ , ಆಗಸ್ಟ್ 11, 2022
23 °C

ಬಾರ್ಸಿಲೋನಾ ಆಟಗಾರರೊಂದಿಗೆ ಅಭ್ಯಾಸಕ್ಕೆ ಮರಳಿದ ಮೆಸ್ಸಿ

ಎಪಿ Updated:

ಅಕ್ಷರ ಗಾತ್ರ : | |

Prajavani

ಬಾರ್ಸಿಲೋನಾ: ಬಾರ್ಸಿಲೋನಾ ಫುಟ್‌ಬಾಲ್‌ ಕ್ಲಬ್‌ಗೆ ಮರಳಿದ ನಂತರ ಸೋಮವಾರ ಪ್ರತ್ಯೇಕವಾಗಿ ಅಭ್ಯಾಸ ನಡೆಸಿದ್ದ ಖ್ಯಾತ ಆಟಗಾರ ಲಯೊನೆಲ್‌ ಮೆಸ್ಸಿ ಬುಧವಾರ, ಕ್ಲಬ್‌ ಆಟಗಾರರನ್ನು ತರಬೇತಿಯಲ್ಲಿ ಸೇರಿಕೊಂಡರು.

ಬಾರ್ಸಿಲೋನಾ ಕ್ಲಬ್‌ಅನ್ನು ತೊರೆಯುವುದಾಗಿ ಹೇಳಿದ್ದ ಬಳಿಕ ಮೆಸ್ಸಿ ತಂಡದ ಆಟಗಾರರ ಜೊತೆ ಇರಲಿಲ್ಲ. ಕ್ಲಬ್‌ನೊಂದಿಗಿನ ಕಾನೂನು ವಿವಾದವನ್ನು ಕೈಬಿಡುವುದಾಗಿ ನಿರ್ಧರಿಸಿದ್ದಾರೆ.

ತರಬೇತಿಯಲ್ಲಿ ತಂಡವನ್ನು ಸೇರಿಕೊಳ್ಳುವ ಮೊದಲು ಅವರು ನೂತನ ಕೋಚ್‌ ರೊನಾಲ್ಡ್‌ ಕೊಯ್‌ಮನ್‌ ಅವರ ಮಾರ್ಗದರ್ಶನದಲ್ಲಿ ಎರಡು ಬಾರಿ ಕೋವಿಡ್‌–19 ಪರೀಕ್ಷೆಗೆ ಒಳಗಾಗಬೇಕಾಯಿತು.

ಪ್ರತ್ಯೇಕ ಅಭ್ಯಾಸ ನಡೆಸಿದ್ದ ಫಿಲಿಪ್‌ ಕುಟಿನೊ ಕೂಡ ಕ್ಲಬ್‌ ಸೇರಿಕೊಂಡಿದ್ದಾರೆ. ನೇಷನ್ಸ್‌ ಲೀಗ್‌ನಲ್ಲಿ ರಾಷ್ಟ್ರೀಯ ತಂಡದ ಪರ ಆಡಲು ತೆರಳಿದ್ದ ಫ್ರೆಂಕಿ ದಿ ಜಾಂಗ್ (ನೆದರ್ಲೆಂಡ್ಸ್‌), ಅನ್ಷು ಫಟಿ ಹಾಗೂ ಸೆರ್ಜಿಯೊ ಬಸ್ಕೆಟ್ಸ್‌ (ಇಬ್ಬರೂ ಸ್ಪೇನ್‌ನವರು‌) ಕೂಡ ಕ್ಲಬ್‌ ಸೇರಿದ್ದಾರೆ. ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡಿರುವ ಸ್ಯಾಮ್ಯುಯೆಲ್‌ ಉಮ್ಟಿಟಿ ತಂಡದಲ್ಲಿ ಆಡಲು ಅನುಮತಿ ಪಡೆದಿದ್ದಾರೆ ಎಂದು ಕ್ಲಬ್‌ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು