ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಫುಟ್‌ಬಾಲ್‌: ಮಾತೃ ಪ್ರತಿಷ್ಠಾನಕ್ಕೆ ಭರ್ಜರಿ ಗೆಲುವು

Last Updated 8 ಮಾರ್ಚ್ 2021, 15:22 IST
ಅಕ್ಷರ ಗಾತ್ರ

ಬೆಂಗಳೂರು: ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿದ ಜ್ಯೋತಿ ಮತ್ತೊಮ್ಮೆ ಮಿಂಚಿದರು. ಅವರ ಹ್ಯಾಟ್ರಿಕ್ ಮತ್ತು ಕೌಸಲ್ಯ ಗಳಿಸಿದ ಎರಡು ಗೋಲುಗಳ ನೆರವಿನಿಂದ ಮಾತೃ ಪ್ರತಿಷ್ಠಾನ ತಂಡ ರಾಜ್ಯ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಮಹಿಳೆಯರ ಲೀಗ್‌ನಲ್ಲಿ ಭರ್ಜರಿ ಜಯ ಗಳಿಸಿತು.

ಸೂಪರ್ ಡಿವಿಷನ್ ತಂಡಗಳಿಗಾಗಿ ಬೆಂಗಳೂರು ಫುಟ್‌ಬಾಲ್ ಮೈದಾನದಲ್ಲಿ ನಡೆಯುತ್ತಿರುವ ಟೂರ್ನಿಯ ಸೋಮವಾರದ ಪಂದ್ಯದಲ್ಲಿ ಮಾತೃ ಪ್ರತಿಷ್ಠಾನ 5–0ಯಿಂದ ರೆಬೆಲ್ಸ್ ವಿಮೆನ್ಸ್‌ ಎಫ್‌ಸಿಯನ್ನು ಮಣಿಸಿತು. ಆರನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿದ ಜ್ಯೋತಿ 71 ಮತ್ತು 87ನೇ ನಿಮಿಷಗಳಲ್ಲಿ ಮತ್ತೆ ಚೆಂಡನ್ನು ಗುರಿ ಮುಟ್ಟಿಸಿದರು. ಕೌಸಲ್ಯ 43 ಹಾಗೂ 68ನೇ ನಿಮಿಷಗಳಲ್ಲಿ ಗೋಲು ಗಳಿಸಿದರು.

ಬೆಂಗಳೂರು ಸಾಕರ್ ಗ್ಯಾಲಕ್ಸಿ ಮತ್ತು ಬೆಂಗಳೂರು ಬ್ರೇವ್ಸ್ ನಡುವಿನ ಮತ್ತೊಂದು ಪಂದ್ಯ 2–2ರಲ್ಲಿ ಡ್ರಾಗೊಂಡಿತು.ಸಾಕರ್ ಗ್ಯಾಲಕ್ಸಿಗಾಗಿ ಇನಿಯ ಸೆಲ್ವಕುಮಾರ್ (6, 48ನೇ ನಿ), ಬ್ರೇವ್ಸ್‌ಗಾಗಿ ಜೆ.ಮಧುಮಿತಾ (24ನೇ ನಿ) ಮತ್ತು ಸತ್ಯಾ ಡಿ (27ನೇ ನಿ) ಗೋಲು ಗಳಿಸಿದರು.

ಮಂಗಳವಾರ ಬೆಳಿಗ್ಗೆ 9ಕ್ಕೆ ಕಿಕ್‌ಸ್ಟಾರ್ಟ್‌ ಎಫ್‌ಸಿ ಮತ್ತು ಸ್ಲ್ಯಾಂಜರ್ಸ್ ಬೆಳಗಾಂ, 11 ಗಂಟೆಗೆ ಬೆಂಗಳೂರು ಯುನೈಟೆಡ್‌ ಎಫ್‌ಸಿ ಮತ್ತು ಪರಿಕ್ರಮ ಎಫ್‌ಸಿ ತಂಡಗಳು ಸೆಣಸಲಿವೆ.

ಡ್ರೀಮ್‌, ಯುನೈಟೆಡ್‌ಗೆ ಗೆಲುವು

ಬೆಂಗಳೂರು ನಗರ ಫುಟ್‌ಬಾಲ್ ಸಂಸ್ಥೆ ಆಯೋಜಿಸಿರುವ ಸೂಪರ್ ಡಿವಿಷನ್ ಲೀಗ್‌ನಲ್ಲಿ ಸೋಮವಾರ ಬೆಂಗಳೂರು ಡ್ರೀಮ್ ಯುನೈಟೆಡ್‌ 2–1ರಿಂದ ಆದಾಯ ತೆರಿಗೆ ತಂಡವನ್ನು, ಎಫ್‌ಸಿ ಬೆಂಗಳೂರು ಯುನೈಟೆಡ್‌ 3–2ರಲ್ಲಿ ಬಿಎಫ್‌ಸಿಯನ್ನು ಮಣಸಿತು.

ಡ್ರೀಮ್ ಯುನೈಟೆಡ್ ಪರ ದೊರ್ಜಿ (52ನೇ ನಿಮಿಷ, ಜೇಕಬ್ ಜಾನ್ 54ನೇ ನಿ) ಮತ್ತು ಆದಾಯ ತೆರಿಗೆ ಸಾಕರ್ ‍ಪರ ಅಮಲ್ (17ನೇ ನಿ, ಪೆನಾಲ್ಟಿ) ಗೋಲು ಗಳಿಸಿದರು. ಎಫ್‌ಸಿ ಬೆಂಗಳೂರಿಗಾಗಿ ಡ್ಯಾನಿಯಲ್ ಒಲಿವರ್ (17ನೇ ನಿ), ರಾಬರ್ಟ್‌ ಪ್ರೈಮಸ್‌ (75ನೇ ನಿ), ರೊನಾಲ್ಡೊ ಆಗಸ್ಟೊ (90+5ನೇ ನಿ) ಗೋಲು ಗಳಿಸಿದರೆ ಬಿಎಫ್‌ಸಿಗಾಗಿ ಶಿವಶಕ್ತಿ (58ನೇ ನಿ), ದಮೈಫಂಗ್‌ (90+3ನೇ ನಿ) ಚೆಂಡನ್ನು ಗುರಿ ಸೇರಿಸಿದರು.

ಮಂಗಳವಾರ ಮಧ್ಯಾಹ್ನ 1.30ಕ್ಕೆ ಕಿಕ್‌ಸ್ಟಾರ್ಟ್‌ ಎಫ್‌ಸಿ ಮತ್ತು ಎಎಸ್‌ಸಿ–ಸೆಂಟರ್ ಎಫ್‌ಸಿ, 3.30ಕ್ಕೆ ಯಂಗ್ ಚಾಲೆಂಜರ್ಸ್‌ ಎಫ್‌ಸಿ ಮತ್ತು ಎಂಇಜಿ–ಸೆಂಟರ್ ಎಫ್‌ಸಿ ನಡುವೆ ಪಂದ್ಯಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT